ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಧೋನಿ ಪಡೆ ದಾಳಿಗೆ ಡೆಲ್ಲಿ ತತ್ತರ

Vishwanath S
Updated On : 19 Apr 2013, 12:08 pm

ನವದೆಹಲಿ: ಮರಳುಗಾಡಿನಲ್ಲಿ ಮರೀಚಿಕೆಯನ್ನು ಅರಸುವಂತೆ ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಮೊದಲ ಜಯವನ್ನು ಹುಡುಕುತ್ತಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಗುರುವಾರ ತವರಿನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 86 ರನ್‌ಗಳ ಹೀನಾಯ ಸೋಲನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್‌ಡೆವಿಲ್ಸ್ 17.3 ಓವರ್‌ಗಳಲ್ಲಿ 83 ರನ್‌ಗಳಿಗೆ ಸರ್ವ ಪತನ ಕಂಡಿತು.
ಸಿಎಸ್‌ಕೆ ಪರ ಆರಂಭಿಕರಾಗಿ ಕಣಕ್ಕಿಳಿದ ವಿಜಯ್ ಹಾಗೂ ಹಸ್ಸಿ ಜೋಡಿ ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಆದರೂ ಈ ಜೋಡಿ ತಂಡಕ್ಕೆ ನೀಡಿದ ಕಾಣಿಕೆ ಕೇವಲ 30 ರನ್ ಮಾತ್ರ. ಈ ವೇಳೆ 18 ರನ್‌ಗಳಿಸಿದ್ದ ವಿಜಯ್, ಮಾರ್ಕೆಲ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರ ಬಂದ ಸುರೇಶ್ ರೈನಾ ನಿಧಾನಗತಿಯ ಬ್ಯಾಟಿಂಗ್‌ಗೆ ಮೊರೆ ಹೋದರು. 32 ಎಸೆತಗಳನ್ನು ಎದುರಿಸಿದ ರೈನಾ ಕೇವಲ 30 ರನ್ ಗಳಿಸಿದರು. ಹಸ್ಸಿ ಜತೆ ರೈನಾ 60 ರನ್‌ಗಳ ಜತೆಯಾಟವಾಡಿದರು. ರೈನಾ ನಂತರ ಬಂದ ನಾಯಕ ಧೋನಿ, ಹಸ್ಸಿ ಜತೆಗೂಡಿ ತಂಡದ ರನ್ ವೇಗವನ್ನು ಹೆಚ್ಚಿಸಿದರು.
ಈ ವೇಳೆ ಸ್ಫೋಟಕ ಹೊಡೆತಗಳಿಗೆ ಮುಂದಾದ ಧೋನಿ 23 ಎಸೆತಗಳಲ್ಲಿ 44 ರನ್‌ಗಳನ್ನು ಗಳಿಸಿದರು. ಧೋನಿಯವರ ಈ ಮೊತ್ತದಲ್ಲಿ 5 ಬೌಂಡರಿಗಳು ಹಾಗೂ 1ಭರ್ಜರಿ ಸಿಕ್ಸರ್ ಬಾರಿಸಿದರು. ಧೋನಿ ವಿಕೆಟ್ ಪತನಗೊಂಡ ನಂತರ ಬಂದ ಬ್ರಾವೊ 2 ಎಸೆತಗಳಲ್ಲಿ 3 ರನ್‌ಗಳಿಸಿ ರನೌಟ್ ಆದರು. ಆದರೆ ಆರಂಭದಿಂದ ಅಂತ್ಯದವರೆಗೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಮೈಕ್ ಹಸ್ಸಿ 50 ಎಸೆತಗಳಲ್ಲಿ 65 ರನ್ ಗಳಿಸಿ ಅಜೇಯರಾಗುಳಿಯುವುದರ ಜತೆಗೆ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು.
ಡೆಲ್ಲಿ ಪತನ: ಚೆನ್ನೈ ನೀಡಿದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಪಂದ್ಯದಲ್ಲಿ ಹೋರಾಟ ನಡೆಸಲಿಲ್ಲ. ಡೆವಿಲ್ಸ್ ಬ್ಯಾಟ್ಸ್‌ಮನ್‌ಗಳು ಇನಿಂಗ್ಸ್‌ನ ಆರಂಭದಿಂದಲೂ ನಿರಂತರವಾಗಿ ವಿಕೆಟ್‌ಚೆಲ್ಲುತ್ತಾ ಸಾಗಿದರು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಹಾಗೂ ಸೆಹ್ವಾಗ್ ತಂಡಕ್ಕೆ 11 ರನ್‌ಗಳ ಕಾಣಿಕೆ ನೀಡಿದರು. ನಂತರ ಬಂದ ಜುನೇಜಾ 2 ಹಾಗೂ ನಾಯಕ ಜಯವರ್ಧನೆ 6 ರನ್‌ಗಳಿಸಿ ಔಟಾದರು. ನಂತರ ಬಂದವರಲ್ಲಿ ಜಾಧವ್ (31) ಅವರನ್ನು ಹೊರತು ಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ದಾಟಲಿಲ್ಲ. ಪಠಾಣ್ 2, ಅಗರ್ಕರ್ 3, ಮಾರ್ಕೆಲ್ 2, ಯಾದವ್ 1 ಹಾಗೂ ನದೀಂ ಅಜೇಯ 2 ರನ್‌ಗಳಿಸಿದರು.
ಚೆನ್ನೈ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮೋಹಿತ್ ಶರ್ಮಾ 3 ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಜಯದ ಮೂಲಕ ಸಿಎಸ್‌ಕೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಡೆಲ್ಲಿ ತಂಡ ಕೊನೆ ಸ್ಥಾನದಲ್ಲಿ ಮುಂದುವರಿದಿದೆ.

ಐಪಿಎಲ್ ಅಂಕಪಟ್ಟಿ
ತಂಡ    ಪಂದ್ಯ    ಗೆಲವು    ಸೋಲು    ಅಂಕ     ಸರಾಸರಿ
ರಾಜಸ್ಥಾನ    5    4    1    8      -1.063
ಆರ್‌ಸಿಬಿ    6    4    2    8    -0.362
ಸನ್‌ರೈಸರ್ಸ್    6    4    2    8    - 0.220
ಸಿಎಸ್‌ಕೆ    5    3    2    6    -0.768
ಮುಂಬೈ    5    3    2    6    -0.50
ಪಂಜಾಬ್    4    2    2    4    -0.432
ಕೆಕೆಆರ್    5    2    3    4    -0.136
ಪುಣೆ    6    2    4    4               - 0.788
ಡೆಲ್ಲಿ    6    0    6    0                - 1.274


ಸ್ಕೋರ್ ಬೋರ್ಡ್
ಸಿಎಸ್‌ಕೆ 169/4 (20 ಓವರ್)
ಮೈಕ್ ಹಸ್ಸಿ ಅಜೇಯ 65 (50), ಮುರಳಿ ವಿಜಯ್ ಎಲ್‌ಬಿಡಬ್ಲ್ಯೂ ಬಿ ಮಾರ್ಕೆಲ್ 18 (13), ಸುರೇಶ್ ರೈನಾ ಸಿ ಜಾಧವ್ ಬಿ ಪಠಾಣ್ 30 (32), ಧೋನಿ ಸಿ ಮೆಂಡಿಸ್ ಬಿ ಯಾದವ್ 44 (23), ಬ್ರಾವೋ ರನೌಟ್ (ಮೆಂಡಿಸ್/ ಜಾಧವ್) 3 (2), ಇತರೆ 9.
ವಿಕೆಟ್ ಪತನ: 1-30, 2-90, 3-164, 4-169.
ಬೌಲಿಂಗ್: ನದೀಂ 3-0-22-0, ಇರ್ಫಾನ್ ಪಠಾಣ್ 4-0-30-1, ಮಾರ್ನೆ ಮಾರ್ಕೆಲ್ 4-0-42-1, ಉಮೇಶ್ ಯಾದವ್ 4-0-33-1, ಸೆಹ್ವಾಗ್ 1-0-9-0, ಅಗರ್ಕರ್ 4-0-29-0.

ಡೆಲ್ಲಿ ಡೇರ್ ಡೆವಿಲ್ಸ್: 83 (17.3 ಓವರ್)
ಡೇವಿಡ್ ವಾರ್ನರ್ ಬಿ ಶರ್ಮಾ 1 (4), ವೀರೇಂದ್ರ ಸೆಹ್ವಾಗ್ ಸಿ ಹಸ್ಸಿ ಬಿ ಶರ್ಮಾ 17 (13), ಜುನೇಜಾ ಎಲ್‌ಬಿಡಬ್ಲ್ಯೂ ಬಿ ಶರ್ಮಾ 2 (3), ಜಯವರ್ಧನೆ ಎಲ್‌ಬಿಡಬ್ಲ್ಯೂ ಬಿ ಮೊರಿಸ್ 6 (11), ಜೀವನ್ ಮೆಂಡಿಸ್ ರನೌಟ್ (ರೈನಾ/ಜಡೇಜಾ) 12 (17), ಜಾಧವ್ ಸಿ ಬ್ರಾವೊ ಬಿ ಮಾರ್ಕೆಲ್ 31 (28), ಇರ್ಫಾನ್ ಪಠಾಣ್ ಸಿ ಬ್ರಾವೊ ಬಿ ಜಡೇಜಾ 2 (6), ಅಜಿತ್ ಅಗರ್ಕರ್ ಸಿ ಬ್ರಾವೊ ಬಿ ಅಶ್ವಿನ್ 3 (7), ಮಾರ್ನೆ ಮಾರ್ಕೆಲ್ ಬಿ ಅಶ್ವಿನ್ 2 (4), ನದೀಂ ಅಜೇಯ 2 (7), ಯಾದವ್ ಸಿ ರೈನಾ ಬಿ ಬ್ರಾವೊ 1 (5). ಇತರೆ 4; ವಿಕೆಟ್ ಪತನ: 1-11, 2-13, 3-30, 4-30, 5-61, 6-68, 7-73, 8-80, 9-82, 10-83.
ಬೌಲಿಂಗ್: ಮಾರ್ಕೆಲ್ 3-0-13-1, ಮೋಹಿತ್ ಶರ್ಮಾ 3-0-10-3, ಮೊರಿಸ್ 2-0-13-1, ಬ್ರಾವೊ 1.3-0-8-1, ರವೀಂದ್ರ ಜಡೇಜಾ 4-0-21-1, ಅಶ್ವಿನ್ 4-0-18-2.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement