ಫುಟ್ಬಾಲ್: ಗ್ರೀನ್ವುಡ್ಗೆ ಜಯ
ಬೆಂಗಳೂರು: ತವರಿನ ಅಂಗಳದ ಲಾಭ ಪಡೆದು ಉತ್ತಮ ಪ್ರದರ್ಶನ ನೀಡಿದ ಗ್ರೀನ್ವುಡ್ ಇಂಟರ್ನ್ಯಾಷನಲ್ ಸ್ಕೂಲ್ ತಂಡವು ಇಲ್ಲಿ ನಡೆಯುತ್ತಿರುವ ಅಂತರ್ನಗರಗಳ ಹಂತದ 3ನೇ ಮಹೀಂದ್ರ ಯೂತ್ ಫುಟ್ಬಾಲ್ ಚಾಲೆಂಜ್ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಜಯ ದಾಖಲಿಸಿದೆ. ಗುರುವಾರ ನಡೆದ ಡೆಲ್ಲಿ ಪಬ್ಲಿಕ್ ಹೈ ಸ್ಕೂಲ್ ವಿರುದ್ಧದ ಪಂದ್ಯದಲ್ಲಿ ಗ್ರೀನ್ವುಡ್ ತಂಡ 1-0 ಅಂತರದ ಗೆಲುವು ದಾಖಲಿಸಿತು. ಗ್ರೀನ್ವುಡ್ ತಂಡದ ಪರ 25ನೇ ನಿಮಿಷದಲ್ಲಿ ಗೋಲು ದಾಖಲಿಸಿದ ವರುಣ್ ನಂಬಿಯಾರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದು ಪಂದ್ಯದಲ್ಲಿ ಗೋವಾದ ಡಾನ್ ಬೋಸ್ಕೊ ತಂಡವು ಕೇರಳ ಸಂತ ಜೋಸೆಫರ ಶಾಲೆ ತಂಡವನ್ನು ವಿರುದ್ಧ 3-2 ಗೋಲುಗಳಿಂದ ಮಣಿಸಿತು. ಕೋಲ್ಕತಾದ ಅಶೋಕ್ನಗರ್ ವಿದ್ಯಾಸಾಗರ್ ಬಾನಿಭಾಬನ್ ತಂಡವು ಮುಂಬೈನ ಡಾನ್ ಬೋಸ್ಕೊ ತಂಡವನ್ನು 1-0 ಅಂತರದಲ್ಲಿ ಮಣಿಸಿತು. ಶುಕ್ರವಾರದ ಪಂದ್ಯಗಳು: ಬೆಳಗ್ಗೆ 8ಕ್ಕೆ ನವದೆಹಲಿ ಹಾಗೂ ಕೋಲ್ಕತಾ, 9ಕ್ಕೆ ಬೆಂಗಳೂರು ಹಾಗೂ ಕೇರಳ, 10ಕ್ಕೆ ಮುಂಬೈ ಹಾಗೂ ಗೋವಾ ತಂಡಗಳ ನಡುವೆ ನಡೆಯಲಿದೆ.