ಫುಟ್ಬಾಲ್: ಗ್ರೀನ್ವುಡ್ಗೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತರ್ನಗರ ಮಹೀಂದ್ರ ಯೂತ್ ಫುಟ್ಬಾಲ್ ಚಾಲೆಂಜ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಗ್ರೀನ್ವುಡ್ ಶಾಲಾ ತಂಡವು ನವದೆಹಲಿಯ ಸೇಂಟ್ ಜೋಸೆಫ್ ಶಾಲಾ ತಂಡದ ವಿರುದ್ಧ 1-0 ಗೋಲುಗಳ ಜಯ ಸಾಧಿಸಿದೆ. ಗ್ರೀನ್ವುಡ್ ಪರ ವರುಣ್ ನಂಬಿಯಾರ್ 48ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಉಳಿದ ಪಂದ್ಯದಲ್ಲಿ ಕೋಲ್ಕತಾದ ಅಶೋಕ್ನಗರ ವಿದ್ಯಾಸಾಗರ್ ಬಾನಿಭಾಬನ್ ತಂಡವು ನವದೆಹಲಿಯ ಡೆಲ್ಲಿ ಪಬ್ಲಿಕ್ ಶಾಲೆ ತಂಡದ ವಿರುದ್ದ 3-2 ಅಂತರದ ಜಯ ಸಾಧಿಸಿದರೆ, ಗೋವಾದ ಡಾನ್ ಬೋಸ್ಕೊ ಶಾಲಾ ತಂಡವು ಮುಂಬೈನ ಡಾನ್ ಬೋಸ್ಕೊ ತಂಡದ ವಿರುದ್ಧ 2-1 ಗೋಲುಗಳಿಂದ ಗೆಲುವು ಕಂಡಿತು.