ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಚಿನ್, ಬ್ರಾಡ್ಮನ್ ಕೈಬಿಟ್ಟ ಡಿಕ್ಕಿ ಬರ್ಡ್

Vishwanath S
Updated On : 20 Apr 2013, 12:17 pm

ನವದೆಹಲಿ: ಸಾರ್ವಕಾಲಿಕ ಟೆಸ್ಟ್ ತಂಡದ ಆಡುವ 11 ಆಟಗಾರರ ಪಟ್ಟಿಯಲ್ಲಿ ಕ್ರಿಕೆಟ್ ದಂತ ಕತೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಡಾನ್ ಬ್ರಾಡ್ಮನ್ ಅವರನ್ನು ಇಂಗ್ಲೆಂಡ್‌ನ ಮಾಜಿ ಅಂಪೈರ್ ಡಿಕ್ಕೀ ಬರ್ಡ್ ಕೈಬಿಟ್ಟ ಹಿನ್ನೆಲೆಯಲ್ಲಿ ಬೇಸರ ವ್ಯಕ್ತವಾಗಿದೆ. ಇದನ್ನು ಏಕಪಕ್ಷೀಯ ಮತ್ತು ಸಮಬಲದಿಂದ ಕೂಡಿಲ್ಲದ ತಂಡ ಎಂದು ಟೀಕಿಸಲಾಗಿದೆ. ಪಾಕಿಸ್ತಾನದ ಆಲ್ರೌಂಡರ್ ಇಮ್ರಾನ್ ಖಾನ್ ನಾಯಕತ್ವದ ವಿವಾದಿತ ತಂಡದಲ್ಲಿ, ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮಾತ್ರ ಸ್ಥಾನ ಪಡೆದಿದ್ದಾರೆ. ತೆಂಡೂಲ್ಕರ್ ಮತ್ತು ಬ್ರಾಡ್ಮನ್ ಜತೆಗೆ, ಬರ್ಡ್ ತಂಡದಲ್ಲಿ ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್ ಸೇರಿದಂತೆ ವೆಸ್ಟ್ ಇಂಡೀಸ್‌ನ ವೇಗದ ಬೌಲರ್‌ಗಳಾದ ಮಾಲ್ಕಮ್ ಮಾರ್ಷಲ್, ಆ್ಯಂಡಿ ರಾಬರ್ಟ್ಸ್, ಜೋಯಲ್ ಗಾರ್ನರ್ ಹಾಗೂ ಮೈಕಲ್ ಹೋಲ್ಡಿಂಗ್ ಸಹ ಸ್ಥಾನ ಪಡೆದಿಲ್ಲ.

ಎನ್‌ಸಿಎ ಮುಚ್ಚಲ್ಲ: ಬಿಸಿಸಿಐ ಸ್ಪಷ್ಟನೆ
ಮುಂಬೈ:
ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯನ್ನು (ಎನ್‌ಸಿಎ) ಮುಚ್ಚುವ ಕುರಿತು ಹರಡಿರುವ ವದಂತಿಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶುಕ್ರವಾರ ತಿರಸ್ಕರಿಸಿದೆ. ಅಕಾಡೆಮಿಯನ್ನು ಪುನಶ್ಚೇತನ ಮತ್ತ ತರಬೇತಿ ಶಿಬಿರವನ್ನಾಗಿಸುವುದಾಗಿ ಬಿಸಿಸಿಐ ಹೇಳಿದೆ. 'ಅಕಾಡೆಮಿ ಮುಚ್ಚುವ ವದಂತಿಗಳು ಸಂಪೂರ್ಣ ಸುಳ್ಳಾಗಿವೆ. ಬಿಸಿಸಿಐ ವಾರ್ಷಿಕವಾಗಿ ಎನ್‌ಸಿಎ ಮತ್ತು ಅದರ ಮೂರು ಪ್ರಾದೇಶಿಕ ಕಚೇರಿಗಳಾದ ಚೆನ್ನೈ, ಮುಂಬೈ ಹಾಗೂ ಮೊಹಾಲಿಯಲ್ಲಿರುವ ಅಕಾಡೆಮಿಗಳ ಕಾರ್ಯಗಳ ಬಗ್ಗೆ ಮೌಲ್ಯಮಾಪನ ಮಾಡುತ್ತದೆ' ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಪ್ರೊ. ರತ್ನಾಕರ್ ಶೆಟ್ಟಿ ಹೇಳಿದ್ದಾರೆ. 'ಎನ್‌ಸಿಎ ಮುಚ್ಚುವ ಬಗ್ಗೆ ಹರಡಿರುವ ವದಂತಿಗಳು ಸುಳ್ಳು. ಅಂತಹ ಯಾವುದೇ ರೀತಿಯ ವಿಚಾರಗಳನ್ನು ಮಾಡಿಲ್ಲ' ಎಂದರು. ಏಪ್ರಿಲ್ 22ರಂದು ಚೆನ್ನೈನಲ್ಲಿ ಎನ್‌ಸಿಎ ಸಭೆ ನಡೆಯಲಿದೆ ಎಂದು ಶೆಟ್ಟಿ ಖಚಿತಪಡಿಸಿದ್ದಾರೆ.

ಅಭದ್ರತೆ: ಹಿಂದೆ ಸರಿದ ಆಟಗಾತಿರ್ಯರು
ಲಖ್ನೌ:
ಇದೇ ಮಾಸಾಂತ್ಯಕ್ಕೆ ನಡೆಯಲಿರುವ ಐಟಿಎಫ್ ಮಹಿಳಾ ಟೆನಿಸ್ ಪಂದ್ಯಾವಳಿಯಿಂದ ಸುಮಾರು 80 ಮಹಿಳಾ ಕ್ರೀಡಾಳುಗಳು ಹಿಂದೆ ಸರಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಕುರಿತಂತೆ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಭೀತಿಗೊಳಗಾಗಿರುವ ಮಹಿಳಾ ಕ್ರೀಡಾಳುಗಳು ಈ ನಿರ್ಧಾರ ಕೈಗೊಂಡಿದ್ದಾರೆಂದು ಹೇಳಲಾಗಿದೆ. 'ಲಖ್ನೌದಲ್ಲಿ ಏ. 24ರಿಂದ 27ರವರೆಗೆ ಭಾರತೀಯ ಟೆನಿಸ್ ಸಂಸ್ಥೆ (ಐಟಿಎಫ್) ಮಹಿಳಾ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಆದರೆ, ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಮಹಿಳೆಯರ ಸುರಕ್ಷತೆಗೆ ಭಂಗ ತರುವಂಥ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ಹಿನ್ನೆಲೆಯಲ್ಲಿ ಮಹಿಳಾ ಕ್ರೀಡಾಳುಗಳು ಪಂದ್ಯಾವಳಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಕೈಗೊಂಡಿರಬಹುದು' ಎಂದು ಗುಜರಾತ್ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಜೆ.ಎಸ್. ಕೌಲ್ ತಿಳಿಸಿದ್ದಾರೆಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement