ಅಂತೂ ಇಂತೂ ಡೆಲ್ಲಿ ಗೆಲ್ತು !
ನವದೆಹಲಿ: ವೀರೇಂದ್ರ ಸೆಹ್ವಾಗ್ (ಅ.95) ಸ್ಫೋಟಕ ಅರ್ಧ ಶತಕದ ನೆರವಿನೊಂದಿಗೆ ಡೆಲ್ಲಿ ಡೇರ್ಡೆವಿಲ್ಸ್ ತಂಡ ಐಪಿಎಲ್ನ 6ನೇ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು.
ಸತತ ಆರು ಪಂದ್ಯಗಳಲ್ಲಿ ಸೋತು ಜಯದ ತಡಕಾಟದಲ್ಲಿದ್ದ ಡೆಲ್ಲಿ ತಂಡ ಅಂತೂ ಏಳನೇ ಪಂದ್ಯದಲ್ಲಿ 9 ವಿಕೆಟ್ ಅಂತರದಿಂದ ಭರ್ಜರಿಯಾಗಿಯೇ ಜಯದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡ 4 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್ಡೆವಿಲ್ಸ್ ಪಡೆ, ಇನ್ನೂ 3 ಓವರ್ಗಳು ಬಾಕಿ ಇರುವಂತೆಯೇ ಕೇವಲ 1 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಜಯದ ಕೇಕೆ ಹಾಕಿತು.
57 ಎಸೆತಗಳನ್ನು ಎದುರಿಸಿದ ಸೆಹ್ವಾಗ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 13 ಬೌಂಡರಿಗಳು ಸೇರಿದ್ದವು. ಇನ್ನು ಸೆಹ್ವಾಗ್ ಜತೆ ಆರಂಭಿಕರಾಗಿ ಅಂಗಣಕ್ಕಿಳಿದಿದ್ದ ನಾಯಕ ಜಯವರ್ಧನೆ (59) ಸಹ ಅರ್ಧ ಶತಕ ಪೇರಿಸಿ ತಂಡ ಬೇಗನೆ ಜಯದ ಹಾದಿ ಹಿಡಿಯಲು ನೆರವಾದರು. 43 ಎಸೆತಗಳನ್ನು ಎದುರಿಸಿದ ಜಯವರ್ಧನೆ ಮೊತ್ತದಲ್ಲಿ 2 ಸಿಕ್ಸರ್ ಮತ್ತು 13 ಬೌಂಡರಿಗಳು ಸೇರಿದ್ದವು.
ಇದಕ್ಕೂ ಮುನ್ನ ಮುಂಬೈ ಇನಿಂಗ್ಸ್ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿ ಅರ್ಧ ಶತಕ ಪೂರೈಸಿದ ಸಚಿನ್ ತೆಂಡೂಲ್ಕರ್ (54) ಮತ್ತು ರೋಹಿತ್ ಶರ್ಮಾ (72) ಜತೆಯಾಟದಲ್ಲಿ 3ನೇ ವಿಕೆಟ್ಗೆ 96 ಪೇರಿಸಿದ್ದರು.
ಪಂದ್ಯದ ಅಂತ್ಯದಲ್ಲಿ 10 ಎಸೆತಗಳಲ್ಲಿ 19 ರನ್ ಕಲೆ ಹಾಕಿದ ಕೀರನ್ ಪೊಲಾರ್ಡ್ ತಂಡದ ಮೊತ್ತ 160ರ ಗಡಿ ದಾಟುವಂತೆ ಮಾಡಿತು.
ಡೆಲ್ಲಿ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಉಮೇಶ್ ಯಾದವ್ ತಮ್ಮ 4 ಓವರ್ಗಳಲ್ಲಿ 31 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.
ಮುಂಬೈ ಇಂಡಿಯನ್ಸ್ 161/4 (20 ಓವರ್)
ಸ್ಮಿತ್ ಸಿ ಯಾದವ್ ಬಿ ಮರ್ವೆ 8(12), ತೆಂಡೂಲ್ಕರ್ ಸಿ ವಾರ್ನರ್ ಬಿ ಯಾದವ್ 54(47), ಕಾರ್ತಿಕ್ ರನೌಟ್ (ಯಾದವ್) 2(6), ಶರ್ಮಾ ಸಿ ರಸ್ಸೆಲ್ ಬಿ ಯಾದವ್ 73(43), ಪೊಲಾರ್ಡ್ ಅಜೇಯ 19(10), ರಾಯುಡು ಅಜೇಯ 2(2), ಇತರೆ 3.
ವಿಕೆಟ್ ಪತನ: 1-11, 2-22, 3-118, 4-149
ಬೌಲಿಂಗ್: ಪಠಾಣ್ 4-0-24-0, ನದೀಂ 4-0-20-0, ಮರ್ವೆ 4-0-35-1, ಯಾದವ್ 4-0-31-2, ಅಗರ್ಕರ್ 3-0-37-0, ರಸ್ಸೆಲ್ 1-0-13-0
ಡೆಲ್ಲಿ ಡೇರ್ಡೆವಿಲ್ಸ್ 165/1 (17 ಓವರ್)
ಜಯವರ್ಧನೆ ಎಲ್ಬಿಡಬ್ಲ್ಯೂ ಬಿ ಮಾಲಿಂಗಾ 59(43), ಸೆಹ್ವಾಗ್ ಅಜೇಯ 95(57), ವಾರ್ನರ್ ಅಜೇಯ 7(5), ಇತರೆ 4.
ವಿಕೆಟ್ ಪತನ: 1-151; ಬೌಲಿಂಗ್: ಮಾಲಿಂಗಾ 4-0-26-1, ಬುಮ್ರಾ 3-0-38-0, ಪಟೇಲ್ 4-0-36-0, ಹರ್ಭಜನ್ 3-0-30-0, ಸ್ಮಿತ್ 2-0-24-0, ಪೊಲಾರ್ಡ್ 1-0-11-0.