ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐ-ಲೀಗ್: ಭವಾನಿಪೊರ್‌ಗೆ ಜಯ

Vishwanath S
Updated On : 21 Apr 2013, 10:02 am

ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐ ಲೀಗ್ 2ನೇ ಡಿವಿಷನ್‌ನ ಅಂತಿಮ ಸುತ್ತಿನ ಎರಡನೇ ಹಂತದ ಭಾನುವಾರದ ಪಂದ್ಯದಲ್ಲಿ ಭವಾನಿಪೊರ್ ತಂಡವು ಸದರ್ನ್ ಸಮಿತಿ ತಂಡದ ವಿರುದ್ಧ 4-1 ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿತು. ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ ಭವಾನಿಪೊರ್ ತಂಡವು ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಸಿಲ್ವಾ ತಂಡಕ್ಕೆ 12, 57 ಹಾಗೂ 74ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಜತೆಗೆ ಮಾರ್ಕ್ ಬ್ಯಾರೆಟ್ಟೊ 14ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಆದರೆ ಸದರ್ನ್ ಸಮಿತಿ ಪಂದ್ಯದಲ್ಲಿ ಉತ್ತಮ ಪ್ರತಿರೋಧ ನೀಡದಿದ್ದರು, ಪಂದ್ಯದ 83ನೇ ನಿಮಿಷದಲ್ಲಿ ಚಾರ್ಲ್ಸ್ ಗೋಲುಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಮತ್ತೊಂದು ಪಂದ್ಯದಲ್ಲಿ ಎಂ.ಡಿ ಸ್ಪೋರ್ಟಿಂಗ್ ತಂಡವು ಮುಂಬೈ ಟೈಗರ್ಸ್ ತಂಡವನ್ನು 2-1 ಅಂತರದಿಂದ ಪರಾಭವಗೊಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement