ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ನವಜೋತ್‌ಗೆ ಬೆಳ್ಳಿ

Vishwanath S
Updated On : 21 Apr 2013, 10:02 am

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಏಷ್ಯಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಕುಸ್ತಿಪಟುಗಳು ಭಾನುವಾರ ಒಂದು ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ನವಜೋತ್ ಕೌರ್ 67ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಮಂಗೋಲಿಯಾದ ಓಚಿರ್ಬ್ಯಾಟ್ ವಿರುದ್ಧ ಸೋಲನುಭವಿಸುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು.
63ಕೆ.ಜಿ ವಿಭಾಗದಲ್ಲಿ ಗೀತಿಕಾ ಜಾಖರ್ ಮತ್ತು 72ಕೆ.ಜಿ ವಿಭಾಗದಲ್ಲಿ ಜ್ಯೋತಿ ಕಂಚಿನ ಪದಕ ಗೆದ್ದುಕೊಂಡರು. ಇನ್ನು ಪುರುಷರ 120ಕೆ.ಜಿ ವಿಭಾಗದಲ್ಲಿ ಹೀತೇಂದರ್ ಕಂಚಿನ ಪದಕ ಗೆದ್ದುಕೊಂಡರು.      ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ನವಜೋತ್ ಕೌರ್ ಚಿನ್ನ ಗೆಲ್ಲುವ ಯತ್ನ ನಡೆಸಿದ್ದರು. ಆದರೆ, ಬಲಿಷ್ಠ ಪ್ರದರ್ಶನ ನೀಡಿದ ಮಂಗೋಲಿಯಾದ ಆಟಗಾರ್ತಿ ಸ್ಥಳೀಯ ಕೌರ್‌ಗೆ ನಿರಾಸೆ ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement