ವೆಟಲ್ಗೆ ಮುಕುಟ
ಬಹರೇನ್: ಹಾಲಿ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟಲ್ ಭಾನುವಾರ ನಡೆದ ಬಹರೇನ್ ಗ್ರ್ಯಾನ್ ಪ್ರೀಯಲ್ಲಿ ಮೊದಲಿಗರಾಗಿ ಹೊರಹೊಮ್ಮಿದರು. ಲೋಟಸ್ ತಂಡದ ಕಿಮಿ ರೈಕೋನನ್ ಅವರು ದ್ವಿತೀಯ ಸ್ಥಾನ ಪಡೆದರೆ, ಲೋಟಸ್ ತಂಡದ ಮತ್ತೊಬ್ಬ ಆಟಗಾರ ರೊಮೇನ್ ಗ್ರಾಸಿಯನ್ ಅವರು ಮೂರನೇ ಸ್ಥಾನ ಗಳಿಸಿದರು.
ದ್ವಿತೀಯ ಸ್ಥಾನದಿಂದ ರೇಸ್ಗೆ ಇಳಿದಿದ್ದ ವೆಟಲ್, 57 ಲ್ಯಾಪ್ಗಳ 192 ಮೈಲುಗಳ ದೂರವನ್ನು ವೇಗವಾಗಿ ಕ್ರಮಿಸಿದರು ಇದು ಅವರ ವೃತ್ತಿಜೀವನದ 28ನೇ ಜಯವಾಗಿದೆ.
ರೈಕೋನನ್ ಅವರನ್ನು ಕೇವಲ 0.10 ಸೆಕೆಂಡ್ಗಳಲ್ಲಿ ಹಿಂದಿಕ್ಕಿದ ವೆಟ್ಟಲ್, ಮೊದಲಿಗರಾಗಿ ಹೊರಹೊಮ್ಮಿದರು.
ಎರಡನೇ ಜಯ: ಇದೇ ವರ್ಷದ ಮಾರ್ಚ್ 24ರಂದು ನಡೆದಿದ್ದ ಪ್ರಸಕ್ತ ರೇಸ್ ಋತುವಿನ ಮೊಟ್ಟ ಮೊದಲ ರೇಸ್ ಆದ, ಮಲೇಷ್ಯಾ ಜಿಪಿಯಲ್ಲಿ ಜಯಭೇರಿ ಬಾರಿಸಿದ್ದ ವೆಟಲ್, ಅವರು ಇದೀಗ ಬಹರೇನ್ ರೇಸ್ ಅನ್ನೂ ಗೆಲ್ಲುವ ಮೂಲಕ, 2013ರ ರೇಸ್ ಋತುವಿನಲ್ಲಿ 2ನೇ ಗೆಲವು ದಾಖಲಿಸಿದ್ದಾರೆ.
ಸಹಾರಾ ಹಿರಿಮೆ: ಬಹರೇನ್ ರೇಸ್ನಲ್ಲಿ ಸಹರಾ ಇಂಡಿಯಾ ತಂಡಕ್ಕೆ ಉತ್ತಮ ಯಶಸ್ಸು ಸಿಕ್ಕಿದೆ. ಸಹರಾ ತಂಡದ ಆಟಗಾರ ಪೌಲ್ ಡಿ ರೆಸ್ತಾ ಅವರು ರೇಸ್ನಲ್ಲಿ 4ನೇ ಸ್ಥಾನ ಗಳಿಸಿದರೆ, ಮತ್ತೊಬ್ಬ ಆಟಗಾರ ಆ್ಯಂಡ್ರಿಯನ್ ಸುಟಿಲ್ 13ನೇ ಸ್ಥಾನ ಗಳಿಸಿದರು.
ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿ, ಪ್ರಮುಖ ರೇಸ್ನಲ್ಲಿ 5ನೇ ಸ್ಥಾನದಿಂದ ಸ್ಪರ್ಧೆಗಿಳಿದಿದ್ದ ಪೌಲ್ ಈ ಬಾರಿ ಉತ್ತಮ ಸಾಧನೆ ಮಾಡಿದರು.
ಬಹರೇನ್ ಜಿಪಿ: ಟಾಪ್ 10
ಸ್ಥಾನ ಕ್ರೀಡಾಳು ತಂಡ
1. ವೆಟಲ್ ರೆಡ್ಬುಲ್
2. ರೈಕೋನನ್ ಲೋಟಸ್
3. ಗ್ರಾಸಿಯನ್ ಲೋಟಸ್
4. ಪೌಲ್ ಡಿ ರೆಸ್ತಾ ಫೋರ್ಸ್ ಇಂಡಿಯಾ
5. ಹ್ಯಾಮಿಲ್ಟನ್ ಮರ್ಸಿಡಿಸ್
6. ಸರ್ಗಿಯೊಪರೇಜ್ ಮೆಕ್ಲಾರೆನ್
7. ಮಾರ್ಕ್ ವೆಬರ್ ರೆಡ್ಬುಲ್
8. ಅಲಾನ್ಸೊ ಫೆರಾರಿ
9. ರೋಸ್ಬರ್ಗ್ ಮರ್ಸಿಡೀಸ್
10. ಜೆನ್ಸನ್ಬಟನ್ ಮೆಕ್ಲಾರೆನ್