ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಕಿರಿಯರ ಬಾಕ್ಸಿಂಗ್: ಪ್ರಯಾಗ್ ಚೌಹಣ್‌ಗೆ ಚಿನ್ನದ ಪದಕ

Vishwanath S
Updated On : 22 Apr 2013, 9:00 am

ನವದೆಹಲಿ: ಭಾರತದ ಯುವ ಬಾಕ್ಸಿಂಗ್ ಪ್ರತಿಭೆ ಪ್ರಯಾಗ್ ಚೌಹಾಣ್ ಕಜಕಸ್ಥಾನದಲ್ಲಿ ನಡೆಯುತ್ತಿರುವ ಎಎಸ್‌ಬಿಸಿ ಏಷ್ಯನ್ ಕಾನ್ಫಿಡರೇಷನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಬುದ್ಧ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಯಾಗ್ 60 ಕೆ.ಜಿ  ವಿಭಾಗದ ಫೈನಲ್‌ಪಂದ್ಯದಲ್ಲಿ ಸ್ಥಳೀಯ ಆಟಗಾರ ಅಜತ್ ಇಲ್ಯೂಬಯೆವ್ ಅವರನ್ನು ಮಣಿಸಿದರು. ಪ್ರಯಾಗ್ ಈ ಜಯದೊಂದಿಗೆ ಭಾರತಕ್ಕೆ ಚಿನ್ನದ ಪದಕ ಬಂದಿತಲ್ಲದೇ, ಪಂದ್ಯಾವಳಿಯಲ್ಲಿ ತಂಡಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೇರಿತು. ಈ ಮೂಲಕ ಭಾರತ ಪಂದ್ಯಾವಳಿಯಲ್ಲಿ  ಒಂದು ಚಿನ್ನ ಹಾಗೂ ಮೂರು ಕಂಚಿನ ಪದಕವನ್ನು ಗೆದ್ದುಕೊಂಡಿತು.
66 ಕೆ.ಜಿ ವಿಭಾಗದಲ್ಲಿ ಭಾಗವಹಿಸಿದ್ದ ಕಿರಿಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಆದಿತ್ಯ ಮಾನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.  ಜಮ್ಮು ಮತ್ತು ಕಾಶ್ಮಿರ ಮೂಲದ 15 ವರ್ಷದ ಈ ಬಾಕ್ಸರ್, ನಾಲ್ಕನೇ ಸುತ್ತಿನಲ್ಲಿ ಉಜ್ಬೇಕಿಸ್ಥಾನದ ಬಾಕ್ಸರ್ ಮೆರ್ಜನೆವ್ ಎಲ್ದಾರ್ ವಿರುದ್ಧ ಹೆಚ್ಚು ಅಂಕಗಳ ಅಂತರದಿಂದ ಪರಾಭವಗೊಂಡರು.  ಇನ್ನು ಮತ್ತೊರ್ವ ಬಾಕ್ಸರ್ ಪ್ರದೀಪ್ 63 ಕೆ.ಜಿ ವಿಭಾಗದ 8ನೇ ಸುತ್ತಿನಲ್ಲಿ ಬೈ ಪಡೆದಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಕಜಕಸ್ಥಾನದ ಸ್ಟೊಲ್ಬೊಸ್ಕಿ ವ್ಲಾಡಿಸ್ಲಾವ್ ವಿರುದ್ಧ ಸೋಲುವ ಮೂಲಕ 3ನೇ ಸ್ಥಾನದಲ್ಲಿ ಉಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement