ಥಾಮಸ್, ಉಬರ್ ಕಪ್ ಫೈನಲ್ಸ್ಗೆ ಭಾರತ ಆತಿಥ್ಯ
ನವದೆಹಲಿ: ಪ್ರತಿಷ್ಠಿತ ಥಾಮಸ್ ಮತ್ತು ಉಬರ್ ಕಪ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಅಂತಿಮ ಸುತ್ತಿನ ಪಂದ್ಯಾವಳಿ ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯಲಿವೆ.
ಎರಡು ಪ್ರತಿಷ್ಠಿತ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಅಂತಿಮ ಸುತ್ತಿಗೆ ಆತಿಥ್ಯ ವಹಿಸುತ್ತಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಅಖಿಲೇಷ್ ದಾಸ್ ಗುಪ್ತಾ ಹೇಳಿದ್ದಾರೆ.
'ದೇಶಕ್ಕೆ ಇಂತಹ ಅವಕಾಶ ಸಿಕ್ಕಿರುವುದನ್ನು ಪ್ರಕಟಿಸಲು ನಾನು ಸಂತಸಪಡುತ್ತೇನೆ. ನಮಗೆ ಇದೊಂದು ದೊಡ್ಡ ಸಾಧನೆಯೇ ಆಗಿದ್ದು, ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯುವಂತೆ ಮತ್ತು ಯಾವುದೇ ರೀತಿಯ ಕಪ್ಪು ಚುಕ್ಕೆ ಉಂಟಾಗದಂತೆ ನಾವು ನೋಡಿಕೊಳ್ಳುತ್ತೇವೆ' ಎಂದು ಗುಪ್ತಾ ತಿಳಿಸಿದರು.
ಆದರೆ, ಪಂದ್ಯಾವಳಿಗಳು ನಡೆಯಬೇಕಿರುವ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.