ವೇಸ್ಟಾಯ್ತು ವ್ಯಾಟ್ಸನ್ ಶತಕ
ರೋಚಕವಾಗಿದ್ದ ಈ ಪಂದ್ಯದಲ್ಲಿ ಚೆನ್ನೈ ತಂಡ, ರಾಜಸ್ಥಾನ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು...
ಚೆನ್ನೈ: ಮೊದಲ ಇನಿಂಗ್ಸ್‌ನಲ್ಲಿ ವ್ಯಾಟ್ಸನ್ ಅಬ್ಬರ, ದ್ವಿತೀಯ ಇನಿಂಗ್ಸ್‌ನಲ್ಲಿ ಮೈಕ್ ಹಸ್ಸಿ ಆರ್ಭಟ. ಇದು ಸೋಮವಾರ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯದ ಒಟ್ಟಾರೆ ಚಿತ್ರಣ. ಹೆಜ್ಜೆ ಹೆಜ್ಜೆಗೂ ರೋಚಕವಾಗಿದ್ದ ಈ ಪಂದ್ಯದಲ್ಲಿ ಚೆನ್ನೈ ತಂಡ, ರಾಜಸ್ಥಾನ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್ ಅವರ ಭರ್ಜರಿ (101) ಶತಕದ ನೆರವಿನಿಂದ 20 ಓವರ್‌ಗಳಿಗೆ ಕೇವಲ 4 ವಿಕೆಟ್ ಕಳೆದುಕೊಂಡು 185 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ನಂತರ, ಬ್ಯಾಟಿಂಗ್‌ಗೆ ಇಳಿದ ಚೆನ್ನೈ, 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ, ಗೆಲವು ಸಾಧಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಶೇನ್ ವ್ಯಾಟ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ 6ನೇ ಆವೃತ್ತಿಯಲ್ಲಿ ಮೊದಲ ಶತಕ ದಾಖಲಿಸಿದರು. ಕೇವಲ 61 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್ ತಮ್ಮ ಶತಕದಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿಸಿದ್ದರು. ವ್ಯಾಟ್ಸನ್ ಜತೆ ಆರಂಭಿಕರಾಗಿ ಅಂಗಣಕ್ಕಿಳಿದ ಅಜಿಂಕ್ಯ ರಹಾನೆ (16) ವ್ಯಾಟ್ಸನ್‌ಗೆ ತಕ್ಕ ಸಾಥ್ ನೀಡಿದರು. ಆದರೆ, ಇಬ್ಬರ ಜತೆಯಾಟ 71 ರನ್ ದಾಖಲಿಸುತ್ತಿದ್ದಂತೆಯೇ 8ನೇ ಓವರ್‌ನಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಅಂತ್ಯಗೊಂಡಿತು. ನಂತರ ಬಂದ ದಿಶಾಂತ್ ಯಾಗ್ನಿಕ್ (7) ಸಹ ಅಶ್ವಿನ್ ಬೌಲಿಂಗ್‌ನಲ್ಲಿ ಕಾಟ್ ಅಂಡ್ ಬೌಲ್ ಆಗಿ ಪೆವಿಲಿಯನ್ ಸೇರಿದರು. ಯಾಗ್ನಿಕ್ ನಂತರ ಬಂದ ನಾಯಕ ರಾಹುಲ್ ದ್ರಾವಿಡ್ ವ್ಯಾಟ್ಸನ್‌ಗೆ ತಕ್ಕ ಸಾಥ್ ನೀಡಲಿಲ್ಲ. ಆದರೆ, ನಂತರ ಬಂದ ಮಧ್ಯಮ ಕ್ರಮಾಂಕದ ಸ್ಟುವರ್ಟ್ ಬಿನ್ನಿ ಅವರ ಅಜೇಯ 36ಗಳ ನೆರವಿನಿಂದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 180ರ ಗಡಿ ದಾಟಿತು.
ಭರ್ಜರಿ ಬೇಟೆ: ರಾಜಸ್ಥಾನ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಮೈಕ್ ಹಸ್ಸಿ ಹಾಗೂ ಸುರೇಶ್ ರೈನಾ ಅವರ ಸಮಯೋಚಿತ ಜತೆಯಾಟದಿಂದ ಗೆಲುವಿನ ನಗೆ ಬೀರಿತು.
ಆರಂಭಿಕರಾಗಿ ಕಣಕ್ಕಿಳಿದ ಹಸ್ಸಿಗೆ ಮುರಳಿ ವಿಜಯ್ ಉತ್ತಮ ಸಾಥ್ ನೀಡಲಿಲ್ಲ. ಕೇವಲ 3 ರನ್‌ಗಳಿಸಿದ್ದ ವಿಜಯ್, ಚಾಂಡಿಲಾ ಎಸೆತದಲ್ಲಿ ಕಾಟ್ ಅಂಡ್ ಬೌಲ್ ಆಗಿ ಹೊರನಡೆದರು. ಈ ವೇಳೆ ಜತೆಯಾದ ಹಸ್ಸಿ ಹಾಗೂ ರೈನಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. 2ನೇ ವಿಕೆಟ್‌ಗೆ ಈ ಜೋಡಿ 61 ಎಸೆತಗಳಲ್ಲಿ 90 ರನ್ ಗಳಿಸಿದರು.
ಈ ವೇಳೆ ರೈನಾ 51 ರನ್‌ಗಳಿಸಿ ಔಟಾದರು. ನಂತರ ಬಂದ ಧೋನಿ 21, ಬ್ರಾವೊ ಅಜೇಯ 15 ರನ್‌ಗಳಿಸಿದರು. ಆರಂಭದಿಂದಲು ಉತ್ತಮವಾಗಿ ಇನಿಂಗ್ಸ್ ಕಟ್ಟಿದ ಮೈಕ್ ಹಸ್ಸಿ 51 ಎಸೆತದಲ್ಲಿ 88 ರನ್‌ಗಳಿಸಿ ತಂಡದ ಜಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ಸ್ಕೋರ್ ಬೋರ್ಡ್
ರಾಜಸ್ಥಾನ್: 185/4 (20 ಓವರ್)
ವ್ಯಾಟ್ಸನ್ ಸಿ ಹಸ್ಸಿ ಬಿ ಬ್ರಾವೊ 101(61)
ರಹಾನೆ ಬಿ ಅಶ್ವಿನ್ 16(15) , ಯಾಗ್ನಿಕ್ ಸಿ ಮತ್ತು ಬಿ ಅಶ್ವಿನ್ 7 (8), ದ್ರಾವಿಡ್ ಸಿ ಧೋನಿ ಬಿ ಬ್ರಾವೊ 6(9), ಬಿನ್ನಿ ಅಜೇಯ 36(22), ಹಾಡ್ಜ್ ಅಜೇಯ 9(6)
ಇತರೆ 10; ವಿಕೆಟ್ ಪತನ: 1-71, 2-84, 3-113, 4-159; ಬೌಲಿಂಗ್: ಮೋಹಿತ್ 2-0-19-0, ಹೋಲ್ಡರ್ 4-0-30-0, ಮೊರಿಸ್ 3-0-32-0, ಅಶ್ವಿನ್ 4-0-20-2, ಜಡೇಜಾ 3-0-45-0, ಬ್ರಾವೊ 4-0-36-2.
ಸಿಎಸ್‌ಕೆ: 186/5 (19.5 ಓವರ್)
ಮುರಳಿ ವಿಜಯ್ ಸಿ ಅಂಡ್ ಬಿ ಚಾಂಡಿಲಾ 3 (5), ಮೈಕಲ್ ಹಸ್ಸಿ ರನೌಟ್ (ದ್ರಾವಿಡ್) 88 (51), ಸುರೇಶ್ ರೈನಾ ಎಲ್‌ಬಿಡಬ್ಲ್ಯೂ ಬಿ ಫಾಕ್ನರ್ 51 (35), ಧೋನಿ ಸಿ ಬಿನ್ನಿ ಬಿ ಫಾಕ್ನರ್ 21 (16), ರವೀಂದ್ರ ಜೋಡಿ ಬಿ ಫಾಕ್ನರ್ 0 (2), ಬ್ರಾವೊ ಅಜೇಯ 15 (9), ಮೋರಿಸ್ ಅಜೇಯ 1 (1). ಇತರೆ 7.
ವಿಕೆಟ್ ಪತನ: 1-22, 2-112, 3-154, 4-154, 5-175; ಬೌಲಿಂಗ್: ಚಾಂಡಿಲಾ 3-0-16-1, ಶುಕ್ಲಾ 2-0-24-0, ಫಾಕ್ನರ್ 4-0-20-3, ಕೂಪರ್ 4-0-49-0, ತ್ರಿವೇದಿ 3-0-32-0, ವ್ಯಾಟ್ಸನ್ 1.5-0-21-0, ಸ್ಟುವರ್ಟ್ ಬಿನ್ನಿ 2-0-20-0.