ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಚಿನ್ ಇನಿಂಗ್ಸ್ ಸ್ಮರಿಸಿದ ಗಿಲ್ಲಿ

Vishwanath S
Updated On : 22 Apr 2013, 10:33 am

ಮೊಹಾಲಿ: ಸಚಿನ್ ತೆಂಡೂಲ್ಕರ್ 40ನೇ ಹುಟ್ಟು ಹಬ್ಬಕ್ಕೆ 2 ದಿನ ಬಾಕಿ ಇರುವಂತೆ, 1998ರಂದು ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಕಟ್ಟಿದ ಅಮೋಘ ಇನಿಂಗ್ಸ್ ಅನ್ನು ಆ್ಯಡಂ ಗಿಲ್‌ಕ್ರಿಸ್ಟ್ ನೆನಪಿಸಿಕೊಂಡರು. ಆ ಪಂದ್ಯದಲ್ಲಿ ಸಚಿನ್ ಶತಕ ಸಿಡಿಸುವುದರೊಂದಿಗೆ ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಂಕಷ್ಟಕ್ಕೀಡು ಮಾಡಿದ್ದನ್ನು ಗಿಲ್ಲಿ ಮೆಲಕು ಹಾಕಿದ್ದಾರೆ. ಶಾರ್ಜಾ ಪಂದ್ಯಾವಳಿಯಲ್ಲಿ ಏಪ್ರಿಲ್ 24ರಂದು ತಮ್ಮ ಹುಟ್ಟಹಬ್ಬದ ದಿನವೇ ಸಚಿನ್ ಒಬ್ಬರೇ ಹೋರಾಡುವ ಮೂಲಕ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು.
'1998ರಲ್ಲಿ ಶಾರ್ಜಾದಲ್ಲಿ ಸಚಿನ್ ಕಟ್ಟಿದ ಇನಿಂಗ್ಸ್ ನನಗೆ ಇನ್ನೂ ನೆನಪಿದೆ. ಅದು ಸಚಿನ್ ಶ್ರೇಷ್ಠ ಇನಿಂಗ್ಸ್‌ಗಳಲ್ಲೊಂದು. ಸಚಿನ್ ಬಗ್ಗೆ ನೀವು ಏನೇ ಹೇಳಬಹುದು. ಆದರೆ, ಅವರೊಬ್ಬ ಬ್ಯಾಟಿಂಗ್ ದಂತಕತೆ. ಸಚಿನ್ ಅವರಿಗೆ ಹಟ್ಟುಹಬ್ಬದ ಶುಭಾಶಯಗಳು' ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

'ಗಾಯಾಳು ಖರ್ಚು ಫ್ರಾಂಚೈಸಿಗಳದ್ದು'
ನವದೆಹಲಿ:
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿರುವ ಭಾರತ ತಂಡದ ಆಟಗಾರರು ಗಾಯಗೊಂಡಲ್ಲಿ, ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ (ಎನ್‌ಸಿಎ) ಅವರ ಪುನಶ್ಚೈತನ್ಯಕ್ಕೆ ಬೇಕಾದ ಖರ್ಚನ್ನು, ಗಾಯಗೊಂಡ ಆಟಗಾರರು ಪ್ರತಿನಿಧಿಸಿರುವ ಫ್ರಾಂಚೈಸಿಗಳೇ ಭರಿಸಬೇಕಂತೆ.
ಚೆನ್ನೈನಲ್ಲಿ ಸೋಮವಾರ ನಡೆದ ಎನ್‌ಸಿಎ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೆ ಸಭೆಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಸದಸ್ಯರು ಈ ಕುರಿತು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲಿ ಗಾಯಗೊಂಡು ಎನ್‌ಸಿಎನಲ್ಲಿ ಪುನಶ್ಚೈತನ್ಯ ಪಡೆಯುವ ಆಟಗಾರರ ಖರ್ಚು ಭರಿಸುವ ಬಗ್ಗೆ ಇದ್ದ ಸಮಸ್ಯೆ ಅಂತ್ಯಗೊಂಡಿದೆ. 'ಐಪಿಎಲ್‌ನಲ್ಲಿ ಗಾಯಗೊಳ್ಳುವ ಆಟಗಾರನಿಗೆ ಎನ್‌ಸಿಎನಲ್ಲಿ ನೀಡಲಾಗುವ ಪುನಶ್ಚೈತನ್ಯ ಹಾಗೂ ಚಿಕಿತ್ಸೆಯ ಖರ್ಚನ್ನು ಆಟಗಾರ ಪ್ರತಿನಿಧಿಸುವ ಫ್ರಾಂಚೈಸಿ ಭರಿಸಬೇಕು' ಎಂದು ಹೆಸರು ಹೇಳಲಿಚ್ಚಿಸಿದ ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement