ಹಾಕಿ: ಕ್ವಾರ್ಟರ್ಗೆ ಕರ್ನಾಟಕ
ಲಖ್ನೌ: ಚೈತ್ರ ಕೆ.ಸಿ ಅವರು ನೀಡಿದ ಉತ್ತಮ ಪ್ರದರ್ಶನದ ನೆರವಿನೊಂದಿಗೆ ಕರ್ನಾಟಕ ಮಹಿಳಾ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ಮೂರನೇ ಹಾಕಿ ಇಂಡಿಯಾ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್ಷಿಪ್ನಲ್ಲಿ ಒಡಿಶಾ ತಂಡದ ವಿರುದ್ಧ ಜಯ ಸಾಧಿಸಿದೆ.
ಇಲ್ಲಿನ ಮೇಜರ್ ಧ್ಯಾನ್ಚಂದ್ ಕ್ರೀಡಾಂಗಣದಲ್ಲಿ ನಡೆದ ಜಿ ಗುಂಪಿನ ಪಂದ್ಯದಲ್ಲಿ ಒಡಿಶಾ ವಿರುದ್ಧ 2-1 ಗೋಲುಗಳ ಅಂತರದ ಜಯ ಸಾಧಿಸಿದ ಕರ್ನಾಟಕ ತಂಡ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಸ್ ಹಂತಕ್ಕೆ ಲಗ್ಗೆ ಇಟ್ಟಿದೆ. ಕರ್ನಾಟಕದ ಪರ ಉತ್ತಮ ಪ್ರದರ್ಶನ ನೀಡಿದ ಚೈತ್ರ 12 ಹಾಗೂ 22ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ನಂತರ 26ನೇ ನಿಮಿಷದಲ್ಲಿ ಒಡಿಶಾ ತಂಡದ ಪರ ರೈನಾ ಯಾಧವ್ ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಸೋಮವಾರ ನಡೆದ ಉಳಿದ ಪಂದ್ಯಗಳಲ್ಲಿ ಮುಂಬೈ ತಂಡವು ರಾಜಸ್ಥಾನ್ ತಂಡವನ್ನು 12-1 ಗೋಲುಗಳ ಬೃಹತ್ ಜಯ ಸಾಧಿಸಿದೆ.
ಬಿ ಗುಂಪಿನ ಪಂದ್ಯದಲ್ಲಿ ಬಂಗಾಳ ತಂಡದ ವಿರುದ್ಧ ಹರ್ಯಾಣ ತಂಡ ವಾಕ್ಓವರ್ ಪಡೆದು ಮುಂದಿನ ಹಂತಕ್ಕೆ ತಲುಪಿತು.
ಎಫ್ ಗುಂಪಿನ ಪಂದ್ಯದಲ್ಲಿ ಬೋಪಾಲ್ ತಂಡವು ರೈಲ್ವೇಸ್ ತಂಡದ ವಿರುದ್ಧ 19-0 ಭಾರಿ ಅಂತರದ ಜಯ ಸಾಧಿಸಿತು.