ಅಭ್ಯಾಸದಲ್ಲಿ ಗೆದ್ದ ವನಿತೆಯರು
ನವದೆಹಲಿ: ಚತುರ ಪ್ರದರ್ಶನ ನೀಡಿದ ರೀತು ರಾಣಿ ಗಳಿಸಿದ ಎರಡು ಗೋಲುಗಳ ನೆರವಿನೊಂದಿಗೆ ಭಾರತ ವನಿತೆಯರ ತಂಡ, ಹಾಲೆಂಡ್‌ನ ರೆಟ್ಟೆರ್ಡಮ್ ಹಾಕಿ ಕ್ಲಬ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ 4-3 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಪಂದ್ಯದ 8ನೇ ನಿಮಿಷದಲ್ಲಿ ಪೂನಂ ರಾಣಿ ಭಾರತದ ಪರ ಮೊದಲ ಗೋಲು ದಾಖಲಿಸಿದರು. ಪಂದ್ಯದ 13ನೇ ನಿಮಿಷದಲ್ಲಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ರೋಟೆರ್ಡಮ್ ಯತ್ನಿಸಿತು. ಆದರೆ, ಪ್ರಯತ್ನ ಫಲ ನೀಡಲಿಲ್ಲ. 19ನೇ ಮತ್ತು 23ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಆತಿಥೇಯ ತಂಡ ಭಾರತದ ವನಿತೆಯರ ಮೇಲೆ ಒತ್ತಡ ಹೆಚ್ಚಿಸಲು ಪ್ರಯತ್ನಿಸಿತು. ಆದರೆ, ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದ ಭಾರತ ವನಿತೆಯರು ತವರಿನ ತಂಡದ ಮೇಲೆ ಒತ್ತಡ ಹೆಚ್ಚುವಂತೆ ನೋಡಿಕೊಂಡರು. 51ನೇ ನಿಮಿಷದಲ್ಲಿ ಗೋಲು ದಾಖಲಿಸಿದ ರೀತು ರಾಣಿ ತಂಡಕ್ಕೆ ವಿಶ್ವಾಸ ಮೂಡಿಸಿದರು. ನಂತರ 57ನೇ ನಿಮಿಷದಲ್ಲಿ ಗೋಲು ದಾಖಲಿಸಿದ ನಮಿತಾ ಟೊಪ್ಪೊ ಪಂದ್ಯದಲ್ಲಿ ಸಮಬಲ ಸಾಧಿಸುವಂತೆ ನೋಡಿಕೊಂಡರು. 62ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿದ ರೀತು ರಾಣಿ ತಂಡಕ್ಕೆ ಜಯ ತಂದುಕೊಟ್ಟರು. ಎಫ್‌ಐಎಚ್‌ನ ಮಹಿಳಾ ವಿಶ್ವ ಹಾಕಿ ಲೀಗ್ 3ನೇ ಸುತ್ತಿನಲ್ಲಿ ಭಾಗವಹಿಸುತ್ತಿರುವ ಭಾರತ ವನಿತೆಯರ ತಂಡಕ್ಕೆ ಪೂರ್ವ ಸಿದ್ಧತಾ ಪ್ರವಾಸವಾಗಿದೆ.