ನಂಬಿದ್ರೂ ಕೈ ಕೊಡ್ತಾರೆ!
ಹಣದ ಹೊಳೆ, ಸೆಲೆಬ್ರೆಟಿಗಳ ರಂಗು, ಅಭಿಮಾನಿಗಳ ಗುಂಗಿನೊಂದಿಗೆ ನಡೆಯುವ ಇಂಡಿಯನ್ ಪ್ರಿಮೀಯರ್ ಲೀಗ್‌ನಲ್ಲಿ ಸಿಕ್ಸರ್, ಬೌಂಡರಿ ಅಟ್ಟಿಸಿ ಕ್ರೀಡಾಂಗಣದಲ್ಲಿ ...
ಹಣದ ಹೊಳೆ, ಸೆಲೆಬ್ರೆಟಿಗಳ ರಂಗು, ಅಭಿಮಾನಿಗಳ ಗುಂಗಿನೊಂದಿಗೆ ನಡೆಯುವ ಇಂಡಿಯನ್ ಪ್ರಿಮೀಯರ್ ಲೀಗ್‌ನಲ್ಲಿ ಸಿಕ್ಸರ್, ಬೌಂಡರಿ ಅಟ್ಟಿಸಿ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಕೇಕೆ ಹಾಕಿಸಿಕೊಳ್ಳುವ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಗೆ ಬೇಡಿಕೆ ಅಪಾರ. ಆದರೆ, ಫ್ರಾಂಚೈಸಿಗಳು ಅಪಾರ ಹಣ ನೀಡಿ ಖರೀದಿಸಿದ ಪ್ರಮುಖ ಆಟಗಾರರ ಬ್ಯಾಟುಗಳು ಈ ಬಾರಿ ಮೌನಕ್ಕೆ ಶರಣಾಗಿವೆ. ಹೀಗಾಗಿ ಫ್ರಾಂಚೈಸಿಗಳ ಮಾಲೀಕರೊಂದಿಗೆ, ಅಭಿಮಾನಿಗಳಿಗೂ ಇದು ನಿರಾಸೆ ಮೂಡಿಸಿದೆ.
2013ರ ಅವತರಣಿಕೆ ಆರಂಭವಾಗಿ ಈಗಾಗಲೇ 25 ಪಂದ್ಯಗಳು ನಡೆದಿದ್ದು, ವಿಶ್ವದ ಬ್ಯಾಟಿಂಗ್ ದಿಗ್ಗಜರೆನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಸೇರಿದಂತೆ ಪ್ರಮುಖ ಆಟಗಾರರೆನಿಸಿರುವ ಕುಮಾರ ಸಂಗಕ್ಕಾರ, ಜಾಕ್ ಕಾಲಿಸ್, ರಾಸ್ ಟೇಲರ್, ಯೂಸುಫ್ ಪಠಾಣ್ ವಿಕೆಟ್‌ಗಳು ಪಟಪಟ ಉದುರುತ್ತಿರುವುದು ಪಂದ್ಯಾವಳಿಯ ಕಳೆಗುಂದಿಸಿದೆ. ಈ ಎಲ್ಲ ಆಟಗಾರರ ವೈಫಲ್ಯದ ವಿವರ ಇಲ್ಲಿದೆ.
ಯಾರವರು?
1. ರಿಕಿ ಪಾಂಟಿಂಗ್ (ಮುಂಬೈ ಇಂಡಿಯನ್ಸ್)
ಪಂದ್ಯ 5, ಇನಿಂಗ್ಸ್ 5, ರನ್ 52, ಸರಾಸರಿ 10.40
2. ಗಿಲ್‌ಕ್ರಿಸ್ಟ್ (ಕಿಂಗ್ಸ್ ಇಲೆವೆನ್ ಪಂಜಾಬ್)
ಪಂದ್ಯ 5, ಇನಿಂಗ್ಸ್ 5, ರನ್ 57, ಸರಾಸರಿ 11.40
3. ಯುಸುಫ್ ಪಠಾಣ್ (ಕೋಲ್ಕತಾ ನೈಟ್ ರೈಡರ್ಸ್)
ಪಂದ್ಯ 5, ಇನಿಂಗ್ಸ್ 5, ರನ್ 61, ಸರಾಸರಿ 20.33
4. ರಾಸ್ ಟೇಲರ್ (ಪುಣೆ ವಾರಿಯರ್ಸ್)
ಪಂದ್ಯ 5, ಇನಿಂಗ್ಸ್ 5, ರನ್ 63, ಸರಾಸರಿ 12.60
5. ಸಚಿನ್ ತೆಂಡೂಲ್ಕರ್ (ಮುಂಬೈ ಇಂಡಿಯನ್ಸ್)
ಪಂದ್ಯ 5, ಇನಿಂಗ್ಸ್ 5, ರನ್ 69, ಸರಾಸರಿ 13.80
6. ಜಾಕ್ ಕಾಲಿಸ್ (ಕೋಲ್ಕತಾ ನೈಟ್ ರೈಡರ್ಸ್)
ಪಂದ್ಯ 5, ಇನಿಂಗ್ಸ್ 5, ರನ್ 81, ಸರಾಸರಿ 16.20
7. ಕುಮಾರ ಸಂಗಕ್ಕಾರ (ಸನ್‌ರೈಸರ್ಸ್ ಹೈದರಾಬಾದ್)
ಪಂದ್ಯ 5, ಇನಿಂಗ್ಸ್ 5, ರನ್ 84, ಸರಾಸರಿ 16.80
8. ಕೀರನ್ ಪೊಲಾರ್ಡ್ (ಮುಂಬೈ ಇಂಡಿಯನ್ಸ್)
ಪಂದ್ಯ 5, ಇನಿಂಗ್ಸ್ 5, ರನ್ 95, ಸರಾಸರಿ 47.50
9. ಡೇವಿಡ್ ಹಸ್ಸಿ (ಕಿಂಗ್ಸ್ ಇಲೆವೆನ್ ಪಂಜಾಬ್)
ಪಂದ್ಯ 5, ಇನಿಂಗ್ಸ್ 5, ರನ್ 124, ಸರಾಸರಿ 31.00
10. ಕೆಮರೂನ್ ವೈಟ್ (ಸನ್‌ರೈಸರ್ಸ್ ಹೈದರಾಬಾದ್)
ಪಂದ್ಯ 7, ಇನಿಂಗ್ಸ್ 7, ರನ್ 121, ಸರಾಸರಿ 17.28
11. ರಾಬಿನ್ ಉತ್ತಪ್ಪ (ಪುಣೆ ವಾರಿಯರ್ಸ್)
ಪಂದ್ಯ 6, ಇನಿಂಗ್ಸ್ 6, ರನ್ 130, ಸರಾಸರಿ 21.66
12. ಜಯವರ್ಧನೆ (ಡೆಲ್ಲಿ ಡೇರ್‌ಡೆವಿಲ್ಸ್)
ಪಂದ್ಯ 6, ಇನಿಂಗ್ಸ್ 6, ರನ್ 134, ಸರಾಸರಿ 22.33