ಫ್ಯಾಷನ್ ದುನಿಯಾದ ಅ, ಆ, ಇ, ಈ...
ಖ್ಯಾತ ಫುಟ್ಬಾಲ್ ಆಟಗಾರ ಬೆಕಂ ಅವರ ಪತ್ನಿ, ಫ್ಯಾಷನ್ ಡಿಸೈನರ್ ವಿಕ್ಟೋರಿಯಾ ಬೆಕಂ ಅವರು ಇನ್ಮುಂದೆ ಲೆಕ್ಚರರ್ ಆಗ್ತಾರಂತೆ. ಇದ್ಯಾಕೆ ಹೀಗೆ... ? ಫ್ಯಾಷನ್ ಲೋಕದ ಈ ತಾರೆಗ್ಯಾಕೆ ಪಾಠದ ಗೀಳು ಎಂದು ಹುಬ್ಬೇರಿಸಬೇಡಿ. ಏಕೆಂದರೆ, ಆಕೆ ಲೆಕ್ಚರರ್ ಆಗ್ತಾ ಇರೋದು ಯಾವುದೇ ಕಾಲೇಜಿಗಲ್ಲ. ಇಷ್ಟರಲ್ಲೇ, ವಾಗ್ ಫ್ಯಾಷನ್ ಫೆಸ್ಟಿವಲ್ ಎಂಬ ಫ್ಯಾಷನ್ ಷೋ ಆರಂಭವಾಗಲಿದೆ. ಸುಮಾರು 15 ದಿನಗಳ ಕಾಲ ನಡೆಯಲಿರುವ ಈ ಫ್ಯಾಷನ್ ಮೇಳಕ್ಕಾಗಿ ಸಿದ್ಧತೆ ನಡೆಸುತ್ತಿರುವ ಹಲವಾರು ಕಿರಿಯರಿಗಾಗಿ, ಈ ಫ್ಯಾಷನ್ ಷೋ ಆಯೋಜನಾ ಮಂಡಳಿ ಒಂದು ತರಬೇತಿ ಶಿಬಿರವನ್ನು ನಡೆಸಲು ತೀರ್ಮಾನಿಸಿದೆ. ಈ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳಲಿರುವ ಯುವ ತರುಣಿಯರಿಗೆ ವಿಕ್ಟೋರಿಯಾ 'ಫ್ಯಾಷನ್' ಅ..ಆ..ಇ..ಈ ಕಲಿಸುತ್ತಾಳಂತೆ.
ತಮಾರಾಳ ದೇಹ ದರುಶನ
ಇತ್ತೀಚೆಗೆ ಪಾರ್ಟಿಯೊಂದರಲ್ಲಿ, ಕಾಣಿಸಿಕೊಂಡಿರುವ ತಮಾರಾ ತಮ್ಮ ಸಿಕ್ಕಾಪಟ್ಟೆ ಫ್ಯಾಷನಬಲ್ ಆಗಿ ಬಂದು ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದಾಳೆ. ಆಕೆ ಪಾರ್ಟಿಗೆ ಬಂದದ್ದಕ್ಕಲ್ಲ ಆಕೆ ಸುದ್ದಿಯಾಗಿದ್ದು, ಪಾರ್ಟಿಯಲ್ಲಿ ಆಕೆ ತೊಟ್ಟಿದ್ದ ಡ್ರೆಸ್ ಮೂಲಕ ಆಕೆ ಎಲ್ಲರ ಗಮನದ ಕೇಂದ್ರಬಿಂದುವಾಗಿದ್ದಾಳೆ. ಪಾರ್ಟಿಯಲ್ಲಿ ಆಕೆ ತೊಟ್ಟಿದ್ದ ಡ್ರೆಸ್ ಮಾತ್ರ ಸಿಕ್ಕಾಪಟ್ಟೆ ಸೆಕ್ಸಿಯಾಗಿತ್ತಂತೆ. ಆಕೆಯ ಪೊಗದಸ್ತಾದ ದೇಹ ದರ್ಶನ ಪಡೆದ ಹಲವಾರು ಮಂದಿ ತಮ್ಮೊಳಗೇ 'ಕೆಂಡ'ಸಂಪಿಗೆಗಳನ್ನು ಅರಳಿಸಿಕೊಂಡಿದ್ದರಂತೆ. ಇಡೀ ಪಾರ್ಟಿ ವಾತಾವರಣವೇ ಬಿಸಿಬಿಸಿಯಾಗಿತ್ತಂತೆ. ಆದರೆ, ಈ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಗಮನಿಸಿದ ಆಕೆ ತನ್ನ ಆಪ್ತರ ಬಳಿ, 'ಐ ಆ್ಯಮ್ ಪ್ರೌಡ್ ಆಫ್ ಮೈ ಬಾಡಿ' ಎಂದಳಂತೆ.