'ಸಚಿನ್ ಆಡಿದಷ್ಟೂ ಖುಷಿಯಾಗಿರ್ತಾರೆ'
ಕೋಲ್ಕತಾ: 40ನೇ ವಸಂತಕ್ಕೆ ಕಾಲಿಡುತ್ತಿರುವ ಸಚಿನ್ ತೆಂಡೂಲ್ಕರ್ಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದ್ದು, ಸಚಿನ್ರ ಬಾಲ್ಯದ ಗುರು ರಮಾಕಾಂತ್ ಆಚ್ರೆಕರ್ ಕೂಡ ತಮ್ಮ ಅಭಿನಂದನೆ ತಿಳಿಸಿದ್ದಾರೆ. ಸಚಿನ್ ಎಷ್ಟು ದಿನಗಳ ಕಾಲ ಕ್ರಿಕೆಟ್ ಆಡುತ್ತಾನೋ ಅಷ್ಟು ದಿನಗಳವರೆಗೂ ಆತ ಸಂತೋಷವಾಗಿರುತ್ತಾನೆ ಎಂದು ತಿಳಿಸಿದ್ದಾರೆ.
ನನ್ನ ಆಶಿರ್ವಾದ ಸದಾ ಸಚಿನ್ ಮೇಲಿರುತ್ತದೆ. ಕ್ರಿಕೆಟ್ ಸಚಿನ್ರ ಕನಸಾಗಿದ್ದು ಆತ ಇನ್ನಷ್ಟು ಕಾಲ ಕ್ರಿಕೆಟ್ ಆಡಲಿ. ಇನ್ನಷ್ಟು ಹೆಚ್ಚಿನ ರನ್ ಹೊಡೆಯಲಿ ಎಂದು ಆಶಿಸುತ್ತೇನೆ ಎಂದು ಆಚ್ರೆಕರ್ ತಿಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾರತತಂಡ 4-0 ಅಂತರದಿಂದ ಟೆಸ್ಟ್ ಸರಣಿಯಲ್ಲಿ ಜಯ ಸಾಧಿಸುವ ಮುನ್ನ ಸಚಿನ್ ತೆಂಡೂಲ್ಕರ್ ಅವರು ತಮ್ಮ ಗುರು ರಮಾಕಾಂತ್ ಅಚ್ರೆಕರ್ ನಿವಾಸಕ್ಕೆ ಭೇಟಿ ನೀಡಿದ್ದರು.
'ಸೋತರೂ, ಉತ್ತಮ ಆಟವಾಡಿದ್ದೇವೆ'
ಚೆನ್ನೈ: ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡ ಉತ್ತಮವಾಗಿ ಬ್ಯಾಟಿಂಗ್ ನಡೆಸಿದರೂ ಪಂದ್ಯದಲ್ಲಿ ಸೋತ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಾಯಕ ರಾಹುಲ್ ದ್ರಾವಿಡ್, ನಮ್ಮ ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಬೌಲರ್ಗಳಿಗೆ ಉತ್ತಮ ವಾತಾವರಣವಿರದ ಕಾರಣ ನಾವು ಸೋಲನುಭವಿಸಬೇಕಾಯಿತು ಎಂದು ತಿಳಿಸಿದ್ದಾರೆ. ನಮ್ಮ ಇನ್ನಿಂಗ್ಸ್ ಉದ್ದಕ್ಕೂ ನಾವು ಯೋಜನೆಯನ್ನು ಉತ್ತಮವಾಗಿ ಉಪಯೋಗಿಸಿದೆವು. ಅಲ್ಲದೆ ನಮ್ಮ ಮೊತ್ತ ಉತ್ತಮವಾಗಿತ್ತು, ಆದರೆ ಬೌಲಿಂಗ್ ಮಾಡಲು ಪಿಚ್ ಬೌಲರ್ಗಳಿಗೆ ಅನುಕೂಲಕರವಾಗಿಲ್ಲದ ಕಾರಣ ನಮಗೆ ಸೋಲೆದುರಾಯಿತು ಎಂದು ದ್ರಾವಿಡ್ ತಿಳಿಸಿದರು.