ಏಷ್ಯನ್ ಸ್ಕ್ವಾಷ್: ಸ್ಫರ್ಧಿಸದಿರಲು ಭಾರತ ನಿರ್ಧಾರ
ನವದೆಹಲಿ: ಭದ್ರತೆ ಕಾರಣದಿಂದ ಪಾಕಿಸ್ತಾನದಲ್ಲಿ ನಡೆಯಲಿರುವ ಈ ಬಾರಿಯ ಸ್ಕ್ವಾಷ್ ಏಷ್ಯನ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸದಿರಲು ಭಾರತ ತಂಡದ ಆಟಗಾರರು ನಿರ್ಧರಿಸಿದ್ದಾರೆ. ಮೇ 1ರಿಂದ ಇಸ್ಲಾಮಬಾದ್‌ನಲ್ಲಿ ನಡೆಯಲಿರುವ ಈ ಪಂದ್ಯವಳಿಗೆ ಭಾರತದ ಪ್ರಮುಖ ಸ್ಕ್ವಾಷ್ ಆಟಗಾರರಾದ ಸೌರವ್ ಘೋಶಾಲ್, ದೀಪಿಕಾ ಪಳ್ಳಿಕಾಲ್ ಸೇರಿದಂತೆ ಇತರ ಆಟಗಾರರು ಪಂದ್ಯವಳಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ನಾವು ಪಾಕಿಸ್ತಾನದಲ್ಲಿನ ಭದ್ರತಾ ಪರಿಸ್ಥಿಯ ಕಾರಣದಿಂದ ಪಂದ್ಯಾವಳಿಯಲ್ಲಿ ಭಾಗವಹಿಸದಿರಲು ನಾವು ಫೆಬ್ರವರಿಯಲ್ಲೇ ನಿರ್ಧರಿಸಿದ್ದು, ಈ ವಿಷಯವನ್ನು ಎಸ್‌ಆರ್‌ಎಫ್‌ಐಗೆ ತಿಳಿಸಲಾಗಿದೆ ಎಂದು ಘೋಶಾಲ್ ತಿಳಿಸಿದರು. ಗಡಿಯಲ್ಲಿ ಇತ್ತೀಚಿಗೆ ನಮ್ಮ ಯೋಧರ ಶಿರಚ್ಛೇದನದ ಘಟನೆ ಹಾಗೂ ಪಾಕಿಸ್ತಾನದಲ್ಲಿ ಸ್ಥಳೀಯ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಜೋಶ್ನಾ ಚಿನ್ನಪ್ಪ, ದೀಪಿಕಾ ಹಾಗೂ ನಾನು ಒಟ್ಟಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದರು.