ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ರವಾಸದ ವೇಳೆ ಪಠ್ಯಪುಸ್ತಕ ತಂದಿದ್ದ ಸಚಿನ್!

Vishwanath S
Updated On : 25 Apr 2013, 12:10 pm

ಲಂಡನ್: ಲಿಟಲ್ ಮಾಸ್ಟರ್ ಹುಟ್ಟುಹಬ್ಬದ ಸಂದರ್ಭದಲ್ಲಿ, ತಮ್ಮ ನೆನಪಿನ ಸಂಗ್ರದಲ್ಲಿರುವ ಕೆಲ ವಿಷಯಗಳನ್ನು ಮಾಜಿ ಕ್ರಿಕೆಟಿಗ ಕಪಿಲ್‌ದೇವ್ ಹಂಚಿಕೊಂಡಿದ್ದಾರೆ. ಸ್ವಭಾವತಃ ನಾಚಿಕೆ ಹಾಗೂ ಸೌಮ್ಯ ಸ್ವಭಾವದ ಸಚಿನ್, ತಾವು 1990ರಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ತಂಡದಲ್ಲಿ ವಿದೇಶ ಪ್ರವಾಸ ಕೈಗೊಂಡಿದ್ದಾಗ, ತಮ್ಮೊಂದಿಗೆ ಶಾಲೆಯ ಪಠ್ಯಪುಸ್ತಕಗಳನ್ನೂ ಕೊಂಡೊಯ್ದಿದ್ದರಂತೆ! ಅವನ್ನು ಕಪಿಲ್ ಮಾತುಗಳಲ್ಲೇ ಓದಿ....
'ಅದು ಇಂಗ್ಲೆಂಡ್‌ಗೆ ಭಾರತ ತಂಡ ಪ್ರವಾಸ ಕೈಗೊಂಡಿದ್ದ ಸಂದರ್ಭ.  ಸೌಮ್ಯ ಸ್ವಭಾವದ ಹುಡುಗನಾಗಿದ್ದ ಸಚಿನ್‌ಗೆ ಆಗಿನ್ನೂ 17 ವರ್ಷ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸಚಿನ್, ಆಗ ತಮ್ಮೊಂದಿಗೆ ಶಾಲೆಯ ಪಠ್ಯಪುಸ್ತಕಗಳನ್ನೂ ಕೊಂಡೊಯ್ಯುತ್ತಿದ್ದ'.  'ಆದರೆ, ಬ್ಯಾಟಿಂಗ್‌ಗೆ ಇಳಿದನೆಂದರೆ, ಅವನಲ್ಲಿ ಅಪಾರ ವೃತ್ತಿಪರತೆ ಎದ್ದುಕಾಣುತ್ತಿತ್ತು. ಅತಿ ಭಾರವಾದ ಬ್ಯಾಟ್‌ನಿಂದ ಆತ ಆಡುತ್ತಿದ್ದ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಆ ಸೊಣಕಲು ದೇಹದ ಹುಡುಗ, ಅಂಥಾ ಭಾರದ ಬ್ಯಾಟ್ ಅನ್ನು ಲೀಲಾಜಾಲವಾಗಿ ಬೀಸುತ್ತಿದ್ದು ನೋಡಿದರೆ ಸೋಜಿಗವೆನಿಸುತ್ತಿತ್ತು. ಅಷ್ಟೇ ಅಲ್ಲ, ಅಷ್ಟು ಚಿಕ್ಕ ವಯಸ್ಸಿಗೇ ಅಪಾರವಾದ ಕ್ರಿಕೆಟ್ ಕಲೆಯನ್ನು ಆತ ಕರಗತ ಮಾಡಿಕೊಂಡಿದ್ದ. ಅಷ್ಟು ಎಳೆ ವಯಸ್ಸಿಗೆ ದೊಡ್ಡ ಮಟ್ಟದ ವೃತ್ತಿಪರತೆಯನ್ನು ನಾನೆಲ್ಲೂ ನೋಡಿರಲಿಲ್ಲ'.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement