ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಾಷ್ಟ್ರೀಯ ಕಿವುಡರ ಕ್ರೀಡಾಕೂಟ

Vishwanath S
Updated On : 24 Apr 2013, 10:38 am

ಬೆಂಗಳೂರು: ಇದೇ ಮೊದಲ ಬಾರಿಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕಿವುಡರ ಕ್ರೀಡಾಕೂಟ ಏಪ್ರಿಲ್ 25ರಿಂದ 29 ವರೆಗೆ ನಡೆಯಲಿದೆ. ಕ್ರೀಡಾಕೂಟದಲ್ಲಿ 21 ರಾಜ್ಯಗಳ ಸುಮಾರು 1500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಕುಸ್ತಿ, ಫುಟ್ಬಾಲ್ ಹಾಗೂ ಈಜು ಸೇರಿದಂತೆ ಒಟ್ಟು 8 ವಿಭಾಗಗಳಲ್ಲಿ ಕ್ರೀಡಾಕೂಟ ನಡೆಯಲಿದೆ. ಇದೇ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಬಲ್ಗೇರಿಯಾದಲ್ಲಿ ನಡೆಯಲಿರುವ ಕಿವುಡರ ವಿಶ್ವ ಚಾಂಪಿಯನ್‌ಷಿಪ್‌ಗೆ ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಒದಗಿಸಲಾಗುವುದು. ಎರಡು ವರ್ಷಗಳ ಹಿಂದಷ್ಟೇ ಕಿವುಡ ಮಹಿಳೆಯರ ಕ್ರೀಡಾಕೂಟದ ಆತಿಥ್ಯ ವಹಿಸಿದ್ದ ರಾಜ್ಯಕ್ಕೆ ಈಗ ಮಹಿಳಾ ಮತ್ತು ಪುರುಷರ ಕ್ರೀಡಾಕೂಟದ ಆತಿಥ್ಯ ದೊರಕಿದೆ.

ಹೊನಲು ಬೆಳಕಿನಲ್ಲಿ ಐ-ಲೀಗ್
ನವದೆಹಲಿ:
ಬರುವ ಋತುವಿನಿಂದ ಐ-ಲೀಗ್ ಫುಟ್ಬಾಲ್ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ. ಆಟಗಾರರು ಮತ್ತು ಫುಟ್ಬಾಲ್ ಕ್ಲಬ್‌ಗಳ ಅಧಿಕಾರಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಫುಟ್ಬಾಲ್ ತಂಡದ ತರಬೇತುದಾರ ವಿಮ್ ಕೋವರ್‌ಮನ್ಸ್ ಬುಧವಾರ ಹೇಳಿದ್ದಾರೆ. ಸಾಮಾನ್ಯವಾಗಿ ಐ- ಲೀಗ್ ಪಂದ್ಯಗಳು ಮಧ್ಯಾಹ್ನ 3ರಿಂದ 4 ಗಂಟೆವರೆಗೆ ನಡೆಯುತ್ತವೆ. ಕೆಲ ಬಾರಿ ಸ್ಥಳೀಯ ಸಮಯ 2 ಗಂಟೆಯಿಂದಲೇ ಆರಂಭವಾಗುತ್ತವೆ. ಸೆಪ್ಟೆಂಬರ್- ಅಕ್ಟೋಬರ್‌ನಿಂದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಆಟಗಾರರು ಮತ್ತು ಅಧಿಕಾರಿಗಳು ಬಿಸಿಲಿನ ತಾಪದ ಕುರಿತು ದೂರು ನೀಡಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. 'ಐ-ಲೀಗ್ ವಿಶ್ವದ ಶ್ರೇಷ್ಠ ಲೀಗ್‌ಗಳಲ್ಲಿ ಒಂದಲ್ಲ. ಹೀಗಾಗಿ ನಾವು ಇದನ್ನು ಒಪ್ಪಿಕೊಳ್ಳಲೇಬೇಕು. ಈ ತೀರ್ಮಾನದಿಂದ ಅನುಕೂಲ ಮತ್ತು ಅನಾನುಕೂಲಗಳೂ ಇವೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಭಾರತೀಯ ಫುಟ್ಬಾಲ್ ಮುನ್ನಡೆಯಬೇಕಾಗಿದೆ' ಎಂದು ಕೋವರ್‌ಮನ್ಸ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement