ಶ್ರೀಕಾಂತ್ಗೆ ಜಯ
ನವದೆಹಲಿ: ಕೆ. ಶ್ರೀಕಾಂತ್ ದಿನದ ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.6 ಆಟಗಾರ ಡೆನ್ಮಾರ್ಕ್ನ ಜಾನ್ ಓ ಜಾರ್ಗನ್ಸೆನ್ ವಿರುದ್ಧ 21-7, 18-21, 21-12 ಸೆಟ್ಗಳ ಅಂತರದಿಂದ ಜಯ ಕಂಡುಕೊಂಡರು. ಪಂದ್ಯದಲ್ಲಿ ಶ್ರೀಕಾಂತ್ 33 ಸ್ಮ್ಯಾಷ್ಗಳನ್ನು ಬಾರಿಸಿದರೆ, ಜಾರ್ಗನ್ಸೆನ್ 17 ಸ್ಮ್ಯಾಷ್ಗಳನ್ನು ಬಾರಿಸಿದರು. ಮೊದಲ ಸೆಟ್ನಲ್ಲಿ ಸುಲಭವಾಗಿ ಜಯ ಸಾಧಿಸಿದ ಶ್ರೀಕಾಂತ್, ದ್ವಿತೀಯ ಸೆಟ್ನಲ್ಲಿ ಅಲ್ಪ ಅಂತರದಿಂದ ಕೈಚೆಲ್ಲಿದರು. ಆದರೆ, 3 ಸೆಟ್ನಲ್ಲಿ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
ಭಟ್ ಪರಾಭವ: ಆದರೆ, ಅರವಿಂದ್ ಭಟ್ ವಿಶ್ವದ ನಂ.8 ಆಟಗಾರ ಕೆನಿಚಿ ಟೊಗೊ ವಿರುದ್ಧ ನಿರೀಕ್ಷೆಯಂತೆ ಸೋಲನುಭವಿಸಿದ್ದಾರೆ.