1ನೇ ಡಿವಿಷನ್ಗೆ ಮೊಹ್ಮದಿಯನ್
ಬೆಂಗಳೂರು: ಕೋಲ್ಕತಾ ಮೂಲದ ಮೊಹ್ಮದಿಯನ್ ಸ್ಪೋರ್ಟಿಂಗ್ ಫುಟ್ಬಾಲ್ ಕ್ಲಬ್ ಗುರುವಾರ ಐ- ಲೀಗ್ 1ನೇ ಡಿವಿಷನ್ಗೆ ಅರ್ಹತೆ ಪಡೆದುಕೊಂಡಿದೆ. ನಗರದಲ್ಲಿ ನಡೆದ ಐ- ಲೀಗ್ 2ನೇ ಡಿವಿಷನ್ನ ಅಂತಿಮ ಸುತ್ತಿನ ಲೀಗ್ ಪಂದ್ಯದಲ್ಲಿ ಭವಾನಿಪೂರ ವಿರುದ್ಧ 0-0 ಅಂತರದಿಂದ ಡ್ರಾ ಸಾಧಿಸಿದ ಮೊಹ್ಮದಿಯನ್ ತಂಡ 1ನೇ ಡಿವಿಷನ್ ಐ- ಲೀಗ್ಗೆ ಅರ್ಹತೆ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ 9 ಪಂದ್ಯಗಳನ್ನಾಡಿದ ಮೊಹ್ಮದಿಯನ್ ತಂಡ 18 ಪಾಯಿಂಟ್ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಕೋಲ್ಕತಾ ಮೂಲದ ಇನ್ನೊಂದು ತಂಡವಾದ ಭವಾನಿಪೂರ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 16 ಅಂಕ ಪಡೆದಿರುವ ಮೇಘಾಲಯದ ರಂಗದಜೀದ್ ತಂಡ 2ನೇ ಸ್ಥಾನದಲ್ಲಿದೆ. ಆದರೆ, ಶುಕ್ರವಾರ ಭವಾನಿಪುರ ಮುಂಬೈ ಟೈಗರ್ಸ್ ಅನ್ನು ಎದುರಿಸಲಿದ್ದು, ಫಲಿತಾಂಶ ಬಂದ ನಂತರ ಯಾವ ತಂಡ ಮೇಲುಗೈ ಪಡೆಯಲಿದೆ ಎಂಬುದು ನಿರ್ಧಾರವಾಗಲಿದೆ.