ಗೇಯ್ಲ್ ಮೀರಿಸಿದ್ದ ಬ್ರಾಡ್ಮನ್!
ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ವಿಂಡೀಸ್ ಆಟಗಾರ ಕ್ರಿಸ್ ಗೇಯ್ಲ್, ಆರ್‌ಸಿಬಿ ತಂಡದ ಪರ 30 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಸಿಡಿಸಿದ್ದು ಕ್ರಿಕೆಟ್ ಪ್ರಿಯರ 'ಹಾಟ್ ಫೇವರಿಟ್' ವಿಷಯ. ಆದರೆ, ಕ್ರಿಸ್ ಗೇಯ್ಲ್‌ಗಿಂತಲೂ ಕಡಿಮೆ ಎಸೆತಗಳಲ್ಲಿ ಡಾನ್ ಬ್ರಾಡ್ಮನ್ ಅವರು ಶತಕ ಬಾರಿಸಿದ್ದು ಬಹುತೇಕರಿಗೆ ನೆನಪಿಲ್ಲ.
ಹೌದು. ವಿಶ್ವ ಕ್ರಿಕೆಟ್‌ನ ದಂತಕಥೆ ಡಾನ್ ಬ್ರಾಡ್ಮನ್, ಅವರು 1932ರ ನವೆಂಬರ್ 2ರಂದು ನಡೆದಿದ್ದ ವಿಲೇಜ್ ಕೌಂಟಿ ಪಂದ್ಯವೊಂದರಲ್ಲಿ ಕೇವಲ 22 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ, ಅದು ಕೌಂಟಿ ಪಂದ್ಯವಾಗಿದ್ದರಿಂದ ವಿಶ್ವ ದಾಖಲೆಗಳ ಪಟ್ಟಿಯಲ್ಲಿ ಅದು ದಾಖಲಾಗಿಲ್ಲ. ಆದರೆ, ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ್ದಂತೂ ಅಕ್ಷರಶಃ ಸತ್ಯ.
ಕ್ರಿಸ್ ಗೇಯ್ಲ್ ಬಗ್ಗೆ ಹಾದಿ ಬೀದಿಗಳಲ್ಲಿ ಬಿಸಿಬಿಸಿ ಚರ್ಚೆಗಳಲ್ಲಿ ತೊಡಗಿರುವ ಈ ಸಂದರ್ಭದಲ್ಲಿ ಡಾನ್ ಬ್ರಾಡ್ಮನ್ ತಮ್ಮ ಛಾಪನ್ನು ಮತ್ತೆ ಮೂಡಿಸಿದ್ದಾರೆ.
ಬ್ರಾಡ್ಮನ್ ಈ ಭರ್ಜರಿ ಶತಕ ಸಿಡಿಸಿದ್ದು ಸೌತ್ ವೇಲ್ಸ್‌ನ ಬ್ಲಾಕ್‌ಹೀತ್ ತಂಡದ ಪರ. ಸೌತ್ ವೇಲ್ಸ್‌ನಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ಕ್ರಿಕೆಟ್ ಪಿಚ್‌ನ ಉದ್ಘಾಟನೆ ಪ್ರಯುಕ್ತ ಬ್ಲಾಕ್‌ಹೀತ್ ಹಾಗೂ ಲಿಂಗೋ ತಂಡಗಳ ನಡುವೆ ಪಂದ್ಯ ಏರ್ಪಡಿಸಲಾಗಿತ್ತು.
ಈ ಪಂದ್ಯದಲ್ಲಿ ತಮ್ಮ ಪರವಾಗಿ ಆಡಲು ಬ್ರಾಡ್ಮನ್ ಅವರಿಗೆ ಬ್ಲಾಕ್‌ಹೀತ್ ತಂಡದ ವ್ಯವಸ್ಥಾಪಕರು ಆಮಂತ್ರಣ ನೀಡಿದ್ದರು. ಆರಂಭಿಕರಾಗಿ ವೆಂಡಲ್ ಜೊತೆ ಕ್ರೀಸ್‌ಗೆ ಕಾಲಿಟ್ಟಿದ್ದ ಬ್ರಾಡ್ಮನ್, ಮೂರು ಓವರ್‌ಗಳಲ್ಲೇ ಶತಕ ಬಾರಿಸಿದ್ದರು.
ಬ್ರಾಡ್ಮನ್ ಬೌಂಡರಿ, ಸಿಕ್ಸರ್ ಮಳೆಗರೆದಿದ್ದು ಹೀಗೆ...
1ನೇ ಓವರ್: 6, 6, 4, 2, 4, 4, 1 (33 ರನ್)
2ನೇ ಓವರ್: 6. 4, 4, 6, 6, 4, 6, 4 (40 ರನ್)
3ನೇ ಓವರ್: 1ಶ್ರೀ, 6, 6, 1, 1ಶ್ರೀ, 4, 4, 6 (27 ರನ್) (2ಶ್ರೀ ವೆಂಡಲ್)