ಚೆಸ್: ಜಯ ಸಾಧಿಸಿದ ಆನಂದ್
ಪ್ಯಾರೀಸ್: ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಚೀನಾದ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ ಅಲೆಖಿನ್ ಸ್ಮಾರಕ ಚೆಸ್ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿದ್ದಾರೆ.
ಉತ್ತಮ ಪ್ರದರ್ಶನ ನೀಡಿದ ಆನಂದ್ ತಮ್ಮ 5ನೇ ಸುತ್ತಿನ ಪಂದ್ಯದಲ್ಲಿ ಲಿರೆನ್ ಅವರನ್ನು ಸುಲಭವಾಗಿ ಮಣಿಸಿದರು. ಈ ಜಯದ ಮೂಲಕ ಪಂದ್ಯಾವಳಿಯಲ್ಲಿ 2.5 ಅಂಕಗಳನ್ನು ಪಡೆದಿರುವ ಆನಂದ್ 6ನೇ ಸ್ಥಾನದಲ್ಲಿದ್ದಾರೆ.
ದಿನದ ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್ನ ಲೌರೆಂಟ್ ಫ್ರೆಸ್ಸಿನೆಟ್(3) ತಮ್ಮ ಎದುರಾಳಿ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್(2) ಅವರನ್ನು ಮಣಿಸಿದ್ದಾರೆ. ರಷ್ಯಾದ ಪೀಟರ್ ಸ್ವಿಡ್ಲರ್(1) ತಮ್ಮ ಎದುರಾಳಿ ಫ್ರಾನ್ಸ್ನ ಮ್ಯಾಕ್ಸಿಮ್ ಲಾಗ್ರೆವ್(3.5) ವಿರುದ್ಧ ಪರಾಭವಗೊಂಡಿದ್ದಾರೆ.
ಇನ್ನು ಇಸ್ರೆಲ್ನ ಬೋರಿಸ್ ಜೆಲ್ಫಾಂಡ್(3) ತಮ್ಮ ಪ್ರತಿಸ್ಪರ್ಧಿ ಲೆವೊನ್ ಅರೋನಿಯನ್(3) ವಿರುದ್ಧ ಡ್ರಾ ಸಾಧಿಸಿದ್ದಾರೆ. ಐದನೇ ಸುತ್ತಿನ ಕೊನೆ ಪಂದ್ಯದಲ್ಲಿ ಇಂಗ್ಲೆಂಡ್ನ ಮೈಕಲ್ ಆ್ಯಡಮ್ಸ್(3), ರಷ್ಯಾದ ನಿಕಿತಾ ವಿಟುಗೊವ್(2) ವಿರುದ್ಧ ಡ್ರಾ ಸಾಧಿಸಿದ್ದಾರೆ.