ಮಿಂಚಿದ ಧೋನಿ: ಗೆದ್ದ ಸೂಪರ್ ಕಿಂಗ್ಸ್
ನಾಯಕ ಮಹೇಂದ್ರ ಸಿಂಗ್ ಧೋನಿ (ಅಜೇಯ 67) ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ...
ಚೆನ್ನೈ: ನಾಯಕ ಮಹೇಂದ್ರ ಸಿಂಗ್ ಧೋನಿ (ಅಜೇಯ 67) ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ ಅಂತರದಿಂದ ಜಯ ಸಾಧಿಸಿತು.
160 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡ, ಉತ್ತಮ ಆರಂಭವನ್ನೇ ಕಂಡಿತ್ತು. ಆದರೆ, ನಂತರ ಸಂಕಷ್ಟದಲ್ಲಿ ಸಿಲುಕಿಕೊಂಡಿತ್ತು. ಆದರೆ, ಅಂತ್ಯದಲ್ಲಿ ಧೋನಿ ತಂಡವನ್ನು ಜಯದ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟ್ ಮಾಡಿದ ಸನ್ರೈಸರ್ಸ್ ತಂಡ ಶಿಖರ್ ಧವನ್ (63) ಅವರ ಅರ್ಧ ಶತಕ ಮತ್ತು ಆಶೀಶ್ ರೆಡ್ಡಿ (36) ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ 6 ವಿಕೆಟ್ ಕಳೆದುಕೊಂಡು 159 ರನ್ ಕಲೆ ಹಾಕಿತ್ತು.
ಗಾಯದಿಂದ ಚೇತರಿಸಿಕೊಂಡ ನಂತರ ಪಂದ್ಯಾವಳಿಯಲ್ಲಿ ಮೊದಲ ಪಂದ್ಯವನ್ನಾಡಿದ ಧವನ್, ಅಲ್ಪ ಮೊತ್ತದ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಉತ್ತಮ ಮೊತ್ತ ಕಲೆ ಹಾಕಲು ನೆರವಾಗಿದ್ದರು. ಆದರೆ, ಚೆನ್ನೈ ತಂಡ ನಿರೀಕ್ಷೆಯನ್ನು ತಲೆ ಕೆಳಗಾಗಿಸಿತು.
ಕೇವಲ 16 ಎಸೆತಗಳನ್ನು ಎದುರಿಸಿದ ಆಶೀಶ್ ರೆಡ್ಡಿ, ಧವನ್ ಅವರೊಂದಿಗೆ ಮುರಿಯದ ಜತೆಯಾಟದಲ್ಲಿ 43 ರನ್ ಕಲೆ ಹಾಕಿದರು. ಅಂತಿಮ ನಾಲ್ಕು ಓವರ್ಗಳಲ್ಲಿ 59 ರನ್ ಗಳಿಸಿದ್ದು ಹೈದರಾಬಾದ್ಗೆ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾಗಿತ್ತು.
ಇನ್ನು ಚೆನ್ನೈ ಗುರಿಯನ್ನು ಸಮರ್ಥವಾಗಿ ಬೆನ್ನಟ್ಟಿದ ಚೆನ್ನೈ ಪಂದ್ಯಾವಳಿಯಲ್ಲಿ ತಾನು ಆಡಿದ 8 ಪಂದ್ಯಗಳಲ್ಲಿ 6ನೇ ಜಯ ಸಾಧಿಸಿತು. ಆರಂಭಿಕರಾದ ಮೈಕಲ್ ಹಸ್ಸಿ (45) ಮತ್ತು ಮುರಳಿ ವಿಜಯ್ (18) ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ನಂತರ ಬಂದ ಬ್ಯಾಟ್ಸ್ಮನ್ಗಳು ಎಡವಿದರಾದರೂ, ಧೋನಿ ಸರಿದೂಗಿಸುವಲ್ಲಿ ಯಶಸ್ವಿಯಾದರು.
ಸನ್ರೈಸರ್ಸ್ ಪರ 3 ವಿಕೆಟ್ ಕಬಳಿಸಿದ ಅಮಿತ್ ಮಿಶ್ರಾ ಉತ್ತಮ ಬೌಲಿಂಗ್ ಪ್ರದರ್ಶಿಸಿದರಾದರೂ, ಎದುರಾಳಿ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವಲ್ಲಿ ಅವರ ಪ್ರದರ್ಶನ ನೆರವಾಗಲಿಲ್ಲ. ಚೆನ್ನೈ ಗೆಲ್ಲಲು ಕಾರಣರಾದ ಮಹೇಂದ್ರ ಸಿಂಗ್ ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ಬೋರ್ಡ್
ಸನ್ರೈಸರ್ಸ್: 159/6 (20 ಓವರ್)
ಡಿ ಕಾಕ್ ಸಿ ವಿಜಯ್ ಬಿ ಮೋಹಿತ್ ಶರ್ಮಾ 4 (3), ಶಿಖರ್ ಧವನ್ ಅಜೇಯ 63 (45), ಹನುಮ ವಿಹಾರಿ ರನೌಟ್ (ರೈನಾ) 2 (3), ಕೆಮೆರೂನ್ ವೈಟ್ ಸಿ ಧೋನಿ ಬಿ ಮೋಹಿತ್ ಶರ್ಮಾ 2 (3), ಅಮಿತ್ ಮಿಶ್ರಾ ಸಿ ಬ್ರಾವೊ ಬಿ ಅಶ್ವಿನ್ 15 (21), ತಲೈವನ್ ಸರ್ಗುಣಮ್ ಸಿ ಅಂಡ್ ಬಿ ಬ್ರಾವೊ 10 (17), ಡರೇನ್ ಸಾಮಿ ಸಿ ಮೋರಿಸ್ ಬಿ ಬ್ರಾವೊ 19 (12), ಆಶೀಶ್ ರೆಡ್ಡಿ ಅಜೇಯ 36 (16). ಇತರೆ 8.
ವಿಕೆಟ್ ಪತನ: 1-4, 2-12, 3-37, 4-61, 5-84, 5-98, 6-16.
ಬೌಲಿಂಗ್: ಮೋಹಿತ್ 3.4-0-25-2, ಹೋಲ್ಡರ್ 4-0-31-0, ಅಶ್ವಿನ್ 4-0-21-1, ಕ್ರಿಸ್ ಮೋರಿಸ್ 3-0-24-0, ಬ್ರಾವೊ 4-0-47-2, ರವೀಂದ್ರ ಜಡೇಜಾ 1-0-8-0.
ಚೆನ್ನೈ ಸೂಪರ್ ಕಿಂಗ್ಸ್: 160/5 (19.4 ಓವರ್)
ಮೈಕ್ ಹಸ್ಸಿ ಸಿ ಡಿ ಕಾಕ್ ಬಿ ಅಮಿತ್ ಮಿಶ್ರಾ 45 (26), ಮುರಳಿ ವಿಜಯ್ ಸ್ಟಂಪ್ಡ್ ಡಿ ಕಾಕ್ ಬಿ ಅಮಿತ್ ಮಿಶ್ರಾ 18 (22), ಸುರೇಶ್ ರೈನಾ ಸಿ ಸಾಮಿ ಬಿ ಅಮಿತ್ ಮಿಶ್ರಾ 16 (13), ಧೋನಿ ಅಜೇಯ 67 (37), ಬ್ರಾವೊ ಸಿ ಆಶೀಶ್ ರೆಡ್ಡಿ ಬಿ ಇಶಾಂತ್ ಶರ್ಮಾ 7 (16), ರವೀಂದ್ರ ಜಡೇಜಾ ಸಿ ಅಮಿತ್ ಮಿಶ್ರಾ ಬಿ ಸ್ಟೇಯ್ನ್ 1 (4), ಮೋರಿಸ್ ಅಜೇಯ 0 (1). ಇತರೆ 6.
ವಿಕೆಟ್ ಪತನ: 1-65, 2-76, 3-99, 4-130, 5-145.
ಬೌಲಿಂಗ್: ಡರೇನ್ ಸಾಮಿ 3-0-31-0, ಇಶಾಂತ್ ಶರ್ಮಾ 4-0-34-1, ಡೇಲ್ ಸ್ಟೇಯ್ನ್ 4-0-45-1, ಕರಣ್ ಶರ್ಮಾ 4-1-8-0, ಅಮಿತ್ ಮಿಶ್ರಾ 4-0-26-3, ಆಶೀಶ್ ರೆಡ್ಡಿ 0.4-0-15-0.