ಸಿಂಧುಗೆ ಕ್ವಾರ್ಟರ್ಗೆ
ನವದೆಹಲಿ: ಭಾರತದ ಉದಯೋನ್ಮುಖ ತಾರೆ ಪಿ.ವಿ. ಸಿಂಧು, ಇಂಡಿಯಾ ಓಪನ್ ಸೂಪರ್ ಸೀರಿಸ್ನ ಮೂರನೇ ಸುತ್ತನ್ನು ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು, ಚೀನಾದ ಯು ಸುನ್ ಅವರನ್ನು 19-21, 21-19, 21-15 ಅಂತರದಲ್ಲಿ ಸೋಲಿಸಿ, ಮುಂದಿನ ಸುತ್ತಿಗೆ ಕಾಲಿಟ್ಟರು.
ಇಡೀ ಪಂದ್ಯದಲ್ಲಿ ಇಬ್ಬರ ಆಟ ತೀವ್ರ ಪೈಪೋಟಿಯಿಂದ ಕೂಡಿತ್ತು. 'ಸೇರಿಗೆ ಸವ್ವಾ ಸೇರು' ಎಂಬಂತೆ ಸಾಗಿದ ಈ ಕದನದಲ್ಲಿ ಸಿಂಧು ಜಯ ಪಡೆಯುವಲ್ಲಿ ಯಶಸ್ವಿಯಾದರು.