ಸೈನಾ ನೆಹ್ವಾಲ್ ಪರಾಭವ
ನವದೆಹಲಿ: ಭಾರೀ ನಿರೀಕ್ಷೆ ಮೂಡಿಸಿದ್ದ ಅಗ್ರ ಶ್ರೇಯಾಂಕದ ಆಟಗಾರ್ತಿ ಸೈನಾ ನೆಹ್ವಾಲ್ ಇಂಡಿಯಾ ಓಪನ್ ಸೂಪರ್ ಸಿರೀಸ್ನ ದ್ವಿತೀಯ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ. ಸೈನಾ ದ್ವಿತೀಯ ಸುತ್ತಿನಲ್ಲಿ ಜಪಾನ್ನ ಯೂ ಹಷಿಮೋತೊ ವಿರುದ್ಧ 21-13, 12-21, 20-22 ಸೆಟ್ಗಳ ಅಂತರದಿಂದ ಸೋಲನುಭವಿಸಿದರು.
ಮೊದಲ ಸೆಟ್ನ ಆರಂಭದಲ್ಲೇ 11-4 ಅಂತರದಿಂದ ಮುನ್ನಡೆ ಕಂಡುಕೊಂಡಿದ್ದ ಸೈನಾ, 21-13 ಅಂತರದಿಂದ ಮೇಲುಗೈ ಸಾಧಿಸಿದರು. ಆದರೆ, ಎರಡನೇ ಸೆಟ್ನಲ್ಲಿ ತಿರುಗಿ ಬಿದ್ದ ಹಷಿಮೋತೊ ಪಂದ್ಯದ ಮೇಲೆ ನಿಯಂತ್ರಣ ಸಾಧಿಸತೊಡಗಿದರು. ಆರಂಭದಲ್ಲಿ ಉತ್ತಮ ಪ್ರತಿರೋಧವನ್ನೇ ತೋರಿದ ಸೈನಾ ನಂತರ ನಿಧಾನಗತಿಯ ಆಟಕ್ಕೆ ಮುಂದಾಗಿದ್ದು 12-21 ಅಂತರಿದಂದ ಕೈಚೆಲ್ಲುವಂತೆ ಮಾಡಿತು. ಇನ್ನು ನಿರ್ಣಾಯಕ ಮತ್ತು ಮೂರನೇ ಸುತ್ತಿನ ಒಂದು ಹಂತದಲ್ಲಿ 22-20 ಅಂತರದಿಂದ ಕೊಂಚ ಮುನ್ನಡೆ ಕಂಡುಕೊಂಡ ಹಷಿಮೋತೊ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.