ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಧೋನಿ ಭಾರತದ ಅದೃಷ್ಟ: ಮೂಡಿ

Vishwanath S
Updated On : 27 Apr 2013, 11:58 am

ಚೆನ್ನೈ: ಸನ್ರೈಸರ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಆಸೀಸ್ನ ಮಾಜಿ ಆಟಗಾರ ಟಾಮ್ ಮೂಡಿ ಹೊಗಳಿದ್ದಾರೆ. ಧೋನಿಯಂತಹ ಆಟಗಾರರನ್ನು ಪಡೆಯಲು ಭಾರತ ಅದೃಷ್ಟ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಧೋನಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಾರೆ. ಧೋನಿ ವಿಶೇಷವಾದ ಆಟಗಾರನಾಗಿದ್ದು, ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ. ಹಾಗಾಗಿ ಧೋನಿಯನ್ನು ಪಡೆಯಲು ಭಾರತ ಅದೃಷ್ಟ ಮಾಡಿದೆ ಎಂದು ತಿಳಿಸಿದರು.

ಅಭಿಮಾನಿಗಳಿಗೆ ದಾಖಲೆ ಅರ್ಪಣೆ
ಕಿಂಗ್ಸ್ ಟನ್: ವಿಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ ಇತ್ತೀಚೆಗೆ ಐಪಿಎಲ್ನಲ್ಲಿ ಆರ್ಸಿಬಿ ಪರ ವೇಗದ ಶತಕಗಳಿಸಿದ ದಾಖಲೆಯನ್ನು ತಮ್ಮ ಕೆರಿಬಿಯನ್ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.
ಕ್ರಿಸ್ ಗೇಯ್ಲ್ ದಾಖಲೆಯ ಇನಿಂಗ್ಸ್ ಆಡಿದ ನಂತರ ಅವರೊಂದಿಗೆ ಸಾಮಾಜಿಕ ತಾಣಗಳಲ್ಲಿ ಮಾತನಾಡುವ ಅವಕಾಶ ಸಿಕ್ಕಿತು. ಈ ಸಂದರ್ಭದಲ್ಲಿ ಗೇಯ್ಲ್ ತಮ್ಮ ದಾಖಲೆಯ ಇನಿಂಗ್ಸ್ ಅನ್ನು ತಮ್ಮ ಕೆರಿಬಿಯನ್ ಅಭಿಮಾನಿಗಳಿಗೆ ಅರ್ಪಿಸುತ್ತೇನೆಂದು ತಿಳಿಸಿದರು ಎಂದು ವೆಸ್ಟ್ ಇಂಡೀಸ್ ಕ್ರಿಕೆಟರ್ಸ್ ಅಸೋಸಿಯೇಷನ್ನ ಅಧ್ಯಕ್ಷ ವೆವಲ್ ಹಿಂಡ್ಸ್ ತಿಳಿಸಿದ್ದಾರೆ.
ಗೇಯ್ಲ್ ತಮ್ಮ ಯಶಸ್ಸನ್ನು ಹೀಗೆ ಮುಂದುವರಿಸಲಿ ಎಂದು ನಾವು ಆಶಿಸುತ್ತೇವೆ. ಗೇಯ್ಲ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement