ವಿನ್ನಿಂಗ್ ರೈಡ್ ಮಾಡಿದ ಕೆಕೆಆರ್
ಕೋಲ್ಕತಾ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್ ಕೆಕೆಆರ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿ ಗೆಲವಿನ ಕೇಕೆ ಹಾಕಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು.
ಪಂಜಾಬ್ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಆ್ಯಡಂ ಗಿಲ್ಕ್ರಿಸ್ಟ್ (27) ಮತ್ತು ಮಂದೀಪ್ ಸಿಂಗ್ (25) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ, ಮಂದೀಪ್ ಸಿಂಗ್ 8ನೇ ಓವರ್ನಲ್ಲಿ ರಜತ್ ಭಾಟಿಯಾ ಬೌಲಿಂಗ್ನಲ್ಲಿ ಇಯಾನ್ ಮಾರ್ಗನ್ಗೆ ಕ್ಯಾಚ್ ನೀಡಿದರು. ನಂತರ 10ನೇ ಓವರ್ನಲ್ಲಿ ಗಿಲ್ಕ್ರಿಸ್ಟ್ ಅವರು ಜಾಕ್ ಕಾಲಿಸ್ ಎಸೆತದಲ್ಲಿ ಮಾರ್ಗನ್ಗೆ ಕ್ಯಾಚ್ ನೀಡಿದರು. ಈ ಇಬ್ಬರೂ ಬ್ಯಾಟ್ಸ್ಮನ್ಗಳು ಸೇರಿದಂತೆ ನಂತರ ಬಂದ ಬ್ಯಾಟ್ಸ್ಮನ್ಗಳು ಸ್ಫೋಟಕ ಬ್ಯಾಟಿಂಗ್ಗೆ ಮುಂದಾಗಲಿಲ್ಲ. ಹೀಗಾಗಿ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲವಾಯಿತು. ಮಂದೀಪ್ ಸಿಂಗ್ ಔಟ್ ಆದ ನಂತರ ಬಂದ ಮನನ್ ವೋಹ್ರಾ (31), ಡೇವಿಡ್ ಹಸ್ಸಿ (21), ಡೇವಿಡ್ ಮಿಲ್ಲರ್ (8) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರು.
ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡ ಆರಂಭದಲ್ಲೇ ನಾಯಕ ಗಂಭೀರ್ (8) ಹಾಗೂ ಪಠಾಣ್ (0) ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ಈ ವೇಳೆ ಜತೆಯಾದ ಬಿಸ್ಲಾ ಹಾಗೂ ಕಾಲಿಸ್ ತಂಡಕ್ಕೆ 66 ರನ್ಗಳ ಜತೆಯಾಟ ನೀಡಿದರು. ಈ ವೇಳೆ 37 ರನ್ಗಳಿಸಿದ ಕಾಲಿಸ್, ಹರ್ಮಿತ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಜತೆಯಾದ ಬಿಸ್ಲಾ(51)ಹಾಗೂ ಮಾರ್ಗನ್(42) ತಂಡಕ್ಕೆ 72 ರನ್ ಜತೆಯಾಟ ನೀಡುವ ಮೂಲಕ ತಂಡಕ್ಕೆ ಗೆಲವು ತಂದುಕೊಟ್ಟರು.
ಸ್ಕೋರ್ ಬೋರ್ಡ್
ಕಿಂಗ್ಸ್ ಇಲೆವೆನ್ ಪಂಜಾಬ್ 149/6 (20 ಓವರ್)
ಗಿಲ್ಕ್ರಿಸ್ಟ್ ಸಿ ಮಾರ್ಗನ್ ಬಿ ಭಾಟಿಯಾ 27(27), ಮನ್ದೀಪ್ ಸಿ ಮಾರ್ಗನ್ ಬಿ ಕಾಲಿಸ್ 25(20), ವೊಹ್ರಾ ಸಿ ದಾಸ್ ಬಿ ಬಾಲಾಜಿ 31(21), ಹಸ್ಸಿ ಸಿ ಸೇನನಾಯಕೆ ಬಿ ಕಾಲಿಸ್ 21(20), ಮಿಲ್ಲರ್ ಬಿ ಲಡ್ಡಾ 10(8), ಗುರುಕೀರ್ತ್ ಅಜೇಯ 28(15), ಅಜರ್ ರನೌಟ್ (ಕಾಲಿಸ್/ಬಿಸ್ಲಾ) 2(7), ಪಿಯೂಶ್ ಅಜೇಯ 0(2), ಇತರೆ 5
ವಿಕೆಟ್ ಪತನ: 1-45, 2-67, 3-96, 4-109, 5-127, 6-131
ಬೌಲಿಂಗ್: ಬಾಲಾಜಿ 4-0-44-1, ಸೇನನಾಯಕೆ 4-1-29-0, ನಾರಾಯಣ್ 4-0-22-0, ಕಾಲಿಸ್ 4-0-14-2, ಲಡ್ಡಾ 2-0-18-1, ಭಾಟಿಯಾ 2-0-17-1
ಕೋಲ್ಕತಾ ನೈಟ್ರೈಡರ್ಸ್ 150/4 (18.2 ಓವರ್)
ಬಿಸ್ಲಾ ಅಜೇಯ 51(44), ಗಂಭೀರ್ ಬಿ ಅಜರ್ 8(6), ಪಠಾಣ್ ಸಿ ಗಿಲ್ಕ್ರಿಸ್ಟ್ ಬಿ ಅಜರ್ 0(1), ಕಾಲಿಸ್ ಸಿ ಗಿಲ್ಕ್ರಿಸ್ಟ್ ಬಿ ಹರ್ಮಿತ್ ಸಿಂಗ್ 37(33), ಮಾರ್ಗನ್ ಸಿ ಗುರುಕೀರ್ತ್ ಬಿ ಅಜರ್ 42(26), ಸೇನನಾಯಕೆ ಅಜೇಯ 0(1), ಇತರೆ 12.
ವಿಕೆಟ್ ಪತನ: 1-10, 2-10, 3-76, 4-148
ಬೌಲಿಂಗ್: ಕುಮಾರ್ 4-0-28-0, ಅಜರ್ 4-0-35-3, ಭಟ್ 3-0-21-0, ಚಾವ್ಲಾ 4-0-33-0, ಹರ್ಮಿತ್ 3.2-0-24-1