ಹಾಲೆಂಡ್ ಪ್ರವಾಸಕ್ಕೆ ಸರ್ದಾರ್ ನಾಯಕ
ನವದೆಹಲಿ: ಹಾಲೆಂಡ್ ಪ್ರವಾಸಕ್ಕೆ ತೆರಳಲಿರುವ 18 ಸದಸ್ಯರ ಭಾರತ ಹಾಕಿ ತಂಡಕ್ಕೆ ಖ್ಯಾತ ಮಿಡ್ಫಿಲ್ಡರ್ ಸರ್ದಾರ್ ಸಿಂಗ್ ನಾಯಕತ್ವ ವಹಿಸಲಿದ್ದಾರೆ. ಏಪ್ರಿಲ್ 27ರಿಂದ ಮೇ 9ರವರೆಗೆ ಭಾರತ ಪುರುಷರ ಹಾಕಿ ತಂಡ ಹಾಲೆಂಡ್ ಪ್ರವಾಸ ಕೈಗೊಳ್ಳಲಿದೆ.
ವಿಶ್ವ ಹಾಕಿ ಲೀಗ್ 3ನೇ ಸುತ್ತಿನ (ಸೆಮಿಫೈನಲ್) ಹಿನ್ನೆಲೆಯಲ್ಲಿ ತಯಾರಿ ನಡೆಸಲು ಭಾರತ ತಂಡ ಈ ಪ್ರವಾಸ ಕೈಗೊಳ್ಳುತ್ತಿದೆ. ಹಾಲೆಂಡ್ನ ರೊಟೆರ್ಡಮ್ನಲ್ಲೇ ಈ ವರ್ಷ ಜೂನ್ 13ರಿಂದ 23ರವರೆಗೆ ಹಾಲೆಂಡ್ನಲ್ಲಿ ವಿಶ್ವ ಹಾಕಿ ಲೀಗ್ ನಡೆಯಲಿದೆ. ಡ್ರ್ಯಾಗ್ ಫ್ಲಿಕರ್ ವಿ.ಆರ್ ರಘನಾಥ್ ಅವರನ್ನು ತಂಡದ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ನಡೆದ ವಿಶ್ವ ಹಾಕಿ ಲೀಗ್ 2ನೇ ಸುತ್ತಿಗೆ ಕೈಬಿಡಲಾಗಿದ್ದ ಡ್ರ್ಯಾಗ್ ಫ್ಲಿಕರ್ ಸಂದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಗಾಯಾಳು ಗುರ್ವಿಂದರ್ ಸಿಂಗ್ ಚಾಂಡಿ ಸ್ಥಾನದಲ್ಲಿ ಸ್ಟ್ರೈಕರ್ ಯುವರಾಜ್ ವಾಲ್ಮಿಕಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಮಿಡ್ಫೀಲ್ಡರ್ ಬೈರೆಂದ್ರ ಲಕ್ರಾ ಮತ್ತು ವಿವಾಹದ ಹಿನ್ನೆಲೆಯಲ್ಲಿ ಗೋಲ್ಕೀಪರ್ ಪಿ.ಆರ್ ಶ್ರೀಜೇಶ್ ತಂಡದಿಂದ ಹೊರಗುಳಿದಿದ್ದಾರೆ.
ತಂಡ: ಗೋಲ್ ಕೀಪರ್ಗಳು- ಪಿಟಿ ರಾವ್, ನಾನಕ್ ಸಿಂಗ್. ರಕ್ಷಣಾ ವಿಭಾಗ: ವಿ.ಆರ್ ರಘುನಾಥ್ (ಉಪನಾಯಕ), ರೂಪಿಂದರ್ ಪಾಲ್ ಸಿಂಗ್, ಹರ್ಬಿರ್ ಸಿಂಗ್ ಸಂಧು, ಕೊತಾಜಿತ್ ಸಿಂಗ್, ಜರ್ಮೈಲ್ ಸಿಂಗ್, ಸಂದೀಪ್ ಸಿಂಗ್.
ಮಿಡ್ಫೀಲ್ಡರ್: ಸರ್ದಾರ್ ಸಿಂಗ್ (ನಾಯಕ), ಮನ್ಪ್ರೀತ್ ಸಿಂಗ್, ಧರ್ಮವೀರ್ ಸಿಂಗ್, ಡ್ಯಾನೀಶ್ ಮುಜ್ತಾಬಾ, ಎಸ್.ಕೆ ಉತ್ತಪ್ಪ. ಮುನ್ನಡೆ ಆಟಗಾರರು: ಎಸ್.ವಿ ಸುನಿಲ್, ಚಿಂಗ್ಲೆನ್ಸಾ ಸಿಂಗ್, ನಿತಿನ್ ತಿಮ್ಮಯ್ಯ, ಆಕಾಶ್ದೀಪ್ ಸಿಂಗ್, ಯುವರಾಜ್ ವಾಲ್ಮಿಕಿ.