ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕನೇರಿಯಾ ಮೇಲ್ಮನವಿ ತಿರಸ್ಕಾರ

Vishwanath S
Updated On : 27 Apr 2013, 11:06 am

ಲಂಡನ್: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ, ಐಸಿಸಿ ವತಿಯಿಂದ ಆಜೀವ ನಿಷೇಧಕ್ಕೊಳಗಾಗಿರುವ ಪಾಕಿಸ್ತಾನದ ಕ್ರಿಕೆಟಿಗ ದಿನೇಶ್ ಕನೇರಿಯಾ, ತಮ್ಮ ನಿಷೇಧದ ಕುರಿತಾಗಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತಗೊಂಡಿದೆ. ಕಳೆದ ವರ್ಷದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡಿದ್ದ ಅವರ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಆಜೀವ ನಿಷೇಧ ಹೇರಿ ಆದೇಶ ನೀಡಿತ್ತು. ಆದರೆ, ಸ್ಪಾಟ್ ಫಿಕ್ಸಿಂಗ್‌ನಲ್ಲಿ ತಾವು ಭಾಗಿಯಾಗಿಲ್ಲವೆಂದು ವಾದಿಸುತ್ತಿದ್ದ ಕನೇರಿಯಾ, ಐಸಿಸಿ ನಿರ್ಧಾರದ ವಿರುದ್ಧ ಲಂಡನ್ ನ್ಯಾಯಾಲಯದ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿದ್ದರು. ಶುಕ್ರವಾರ ದಿನೇಶ್ ಅವರ ಮೇಲ್ಮನವಿಯನ್ನು ಲಂಡನ್ ನ್ಯಾಯಾಲಯ ತಳ್ಳಿಹಾಕಿ, ಐಸಿಸಿ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement