ಮುಂಬೈಗೆ ಶರಣಾದ ಆರ್ಸಿಬಿ
'ತವರಿನ ಅಂಗಣದಲ್ಲಿ ಮಾತ್ರ ರಾಯಲ್ ಚಾಲೆಂಜಸ್ (ಆರ್ಸಿಬಿ) ತಂಡದ ಆಟಗಾರರು ಹುಲಿಗಳು'...
ಮುಂಬೈ: 'ತವರಿನ ಅಂಗಣದಲ್ಲಿ ಮಾತ್ರ ರಾಯಲ್ ಚಾಲೆಂಜಸ್ (ಆರ್ಸಿಬಿ) ತಂಡದ ಆಟಗಾರರು ಹುಲಿಗಳು' ಎಂಬ ಟೀಕೆಯನು ಆ ತಂಡ ಮತ್ತೊಮ್ಮೆ ಸಾಬೀತು ಮಾಡಿದೆ. ಶನಿವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 55 ರನ್ಗಳ ಭಾರೀ ಸೋಲನು ಅನುಭವಿಸುವ ಮೂಲಕ ಮತ್ತೊಮ್ಮೆ ಟೀಕಾಕಾರದ ಬಾಯಿಗೆ ಆಹಾರವಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಇದುವರೆಗೂ 9 ಪಂದ್ಯಗಳನಾಡಿರುವ ಆರ್ಸಿಬಿ, 6 ಪಂದ್ಯಗಳಲ್ಲಿ ಜಯಗಳಿಸಿದೆ. ಈ ಆರೂ ಪಂದ್ಯಗಳು ತವರಿನಲ್ಲೇ ನಡೆದಿದ್ದು, ಸೋತಿರುವ ಮೂರೂ ಪಂದ್ಯಗಳು ತವರಿನಾಚೆ ನಡೆದ ಪಂದ್ಯಗಳಾಗಿವೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ತಂಡ, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 194 ರನ್ಗಳ ಭರ್ಜರಿ ಮೊತ್ತವನು ಗಳಿಸಿತ್ತು. ಈ ಮೊತ್ತವನು ಬೆನಟ್ಟಿದ ಆರ್ಸಿಬಿ, 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 136 ರನ್ ಮಾತ್ರ ಗಳಿಸಿತು.
ಮುಂಬೈ ನೀಡಿದ್ದ ದೊಡ್ಡ ಗುರಿಯನು ಬೆನಟ್ಟಿದ ಆರ್ಸಿಬಿ, ಅಗಾಧವಾಗಿ ತಾನು ನಂಬಿಕೆಯಿಡುವ ಕ್ರಿಸ್ ಗೇಯ್ಲ್ ಅವರನು ಅಲ್ಪಮೊತ್ತಕ್ಕೇ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ, ಪುಣೆ ವಿರುದ್ಧ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದ್ದ ಕ್ರಿಸ್ ಗೇಯ್ಲ್, ಈ ಪಂದ್ಯದಲ್ಲಿ ಕೇವಲ 18 ರನ್ ಗಳಿಸಿ ಔಟಾದರು.
ಕ್ರಿಸ್ ಗೇಯ್ಲ್ಗೂ ಮುನ ತಿಲಕರತೆ ದಿಲ್ಷಾನ್ ಅವರನು ಕಳೆದುಕೊಂಡಿದ್ದ ಆರ್ಸಿಬಿ, ಆನಂತರ, ವಿರಾಟ್ ಕೊಹ್ಲಿ ಅವರನೂ ಕಳೆದುಕೊಂಡಿತು. ಆಗ, ತಂಡಕ್ಕಿದ್ದ ಒಂದೇ ಒಂದು ಆಸರೆಯೆಂದರೆ, ಡಿವಿಲಿಯರ್ಸ್.
ಆದರೆ, ಕೇವಲ 2 ರನ್ ಗಳಿಸಿ ಔಟಾದ ಡಿವಿಲಿಯರ್ಸ್ ನಿರಾಸೆಗೊಳಿಸಿದರು. ಅಲ್ಲಿಗೆ, ಆರ್ಸಿಬಿ ಗೆಲ್ಲುತ್ತೆ ಅನೋ ಆಸೆಯನು ಅಭಿಮಾನಿಗಳು ಬಹುತೇಕ ಕೈಬಿಟ್ಟಂತಾಯ್ತು.
ಮಧ್ಯಮ ಕ್ರಮಾಂಕದ ಸೌರಭ್ ತಿವಾರಿ ಕೊಂಚ ಹೋರಾಡಿದರಾದರೂ, ಅದು ಆರ್ಸಿಬಿ ತಂಡವನು ಗೆಲ್ಲಿಸುವಷ್ಟು ಸಶಕ್ತವಾದ ಹೋರಾಟವಾಗಿರಲಿಲ್ಲ.
ಆದರೆ, ಅಂತಿಮ ಹಂತದಲ್ಲಿ ವಿನಯ್ ಕುಮಾರ್ ಹಾಗೂ ರವಿ ರಾಮ್ಪಾಲ್ 8ನೇ ವಿಕೆಟ್ಗೆ ಮುರಿಯದ 51 ರನ್ಗಳ ಜೊತೆಯಾಟವಾಡಿದರಾದರೂ, ತಂಡಕ್ಕೆ ಜಯ ತಂದುಕೊಡಲು ಆಗಲಿಲ್ಲ. ಕೊನೆಯ ಓವರ್ನಲ್ಲಿ ಗೆಲವಿಗಾಗಿ 70 ರನ್ ಪೇರಿಸುವ ಒತ್ತಡಕ್ಕೆ ರವಿ-ವಿನಯ್ ಜೋಡಿ ಸಿಲುಕಿತ್ತೆಂದರೆ ತಂಡದ ಹೀನಾಯ ಪರಿಸ್ಥಿತಿಯನು ಅಂದಾಜಿಸಬಹುದು. ಅಂತಿಮವಾಗಿ, ಆರ್ಸಿಬಿ 20 ಓವರ್ಗಳಲ್ಲಿ ಕೇವಲ 136 ರನ್ಗಳಿಗಷ್ಟೇ ತೃಪ್ತಿಪಡಬೇಕಾಯಿತು.
ಮಿಂಚಿದ ಮುಂಬೈ: ಆರ್ಸಿಬಿ ಇನಿಂಗ್ಸ್ಗೂ ಮುನ ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ, ಡ್ವೇನ್ ಸ್ಮಿತ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಸ್ಫೋಟಕ ಆರಂಭದ ನೆರವಿನಿಂದಾಗಿ 195 ರನ್ ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಚಿನ್ ಭರ್ಜರಿ ಆರಂಭವನು ನೀಡಿದರು. ಕೇವಲ 13 ಎಸೆತಗಳನು ಎದುರಿಸಿದ ಸಚಿನ್ 5 ಬೌಂಡರಿಗಳ ನೆರವಿನಿಂದ 23 ರನ್ ಕಲೆಹಾಕಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್ಮನ್ ಡ್ವೇನ್ ಸ್ಮಿತ್ 36 ಎಸೆತದಲ್ಲಿ 4 ಬೌಂಡರಿ 3 ಸಿಕ್ಸರ್ಗಳ ನೆರವಿನಿಂದ 50 ರನ್ ಗಳಿಸಿದರು.
ಈ ಇಬ್ಬರು ಆರಂಭಿಕರು ಹಾಕಿ ಕೊಟ್ಟ ಬುನಾದಿಯನು ಸಮರ್ಥವಾಗಿ ಬಳಸಿಕೊಂಡ ಮುಂಬೈ ತಂಡದ ಬ್ಯಾಟ್ಸ್ಮನ್ಗಳು ನಂತರ ಉತ್ತಮ ಮೊತ್ತವನು ಕಲೆಹಾಕಿದರು.
ದಿನೇಶ್ ಕಾರ್ತಿಕ್ 33 ಎಸೆತಗಳಲ್ಲಿ 42 ರನ್ಗಳಿಸಿದರೆ, ನಾಯಕ ರೋಹಿತ್ ಶರ್ಮಾ 8 ಎಸೆತಗಳಲ್ಲಿ 10 ರನ್ಗಳಿಸಿ ಡಿವಿಲಿಯರ್ಸ್ ಕ್ಷೇತ್ರರಕ್ಷಣೆಯಲ್ಲಿ ರನೌಟ್ ಆದರು.
ಈ ವೇಳೆ ಕ್ರೀಸ್ಗೆ ಇಳಿದ ಪೊಲಾರ್ಡ್ 16 ಎಸೆತಗಳಲ್ಲಿ ಸ್ಫೋಟಕ 34 ರನ್ಗಳಿಸಿದರು. ನಂತರ ಬಂದ ಅಂಬಟಿ ರಾಯುಡು ಯಾವುದೇ ಎಸೆತ ಎದುರಿಸದೇ ರನೌಟ್ ಆದರು. 17ನೇ ಓವರ್ನ 2 ಹಾಗೂ 3ನೇ ಎಸೆತದಲ್ಲಿ ಕ್ರಮವಾಗಿ ದಿನೇಶ್ ಕಾರ್ತಿಕ್ ಹಾಗೂ ರಾಯುಡು ರನೌಟ್ ಆದರು 4ನೇ ಎಸೆತದಲ್ಲಿ ಪೊಲಾರ್ಡ್, ವಿನಯ್ ಎಸೆತದಲ್ಲಿ ರಾಮ್ಪಾಲ್ಗೆ ಕ್ಯಾಚ್ ನೀಡಿ ಹೊರ ನಡೆದರು.
ನಂತರ ಬಂದ ಹಭಜನ್ ಸಿಂಗ್ 8 ಎಸೆತದಲ್ಲಿ 16 ರನ್ಗಳಿಸಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮವಾಗಿ ಮುಂಬೈ ತಂಡ 7 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತು.
ಸ್ಕೋರ್ ಬೋರ್ಡ್
ಮುಂಬೈ ಇಂಡಿಯನ್ಸ್: 194/7 (20 ಓವರ್)
ಡ್ವೈನ್ ಸ್ಮಿತ್ ಬಿ ಸಯ್ಯದ್ ಮಹಮ್ಮದ್ 50 (36), ಸಚಿನ್ ತೆಂಡೂಲ್ಕರ್ ಎಲ್ಬಿಡಬ್ಲ್ಯೂ ಬಿ ಸಿಂಗ್ 23 (13), ದಿನೇಶ್ ಕಾರ್ತಿಕ್ ರನೌಟ್ (ಕೊಹ್ಲಿ) 42 (33), ರೋಹಿತ್ ಶರ್ಮಾ ರನೌಟ್ (ಡಿ ವಿಲಿಯರ್ಸ್/ಮಹಮ್ಮದ್) 10 (8), ಪೊಲಾರ್ಡ್ ಸಿ ರಾಮ್ಪಾಲ್ ಬಿ ವಿನಯ್ ಕುಮಾರ್ 34 (16), ರಾಯುಡು ರನೌಟ್ (ಕೊಹ್ಲಿ) 0 (0), ಹರ್ಭಜನ್ ಸಿಂಗ್ ಸಿ ತಿವಾರಿ ಬಿ ರಾಮ್ಪಾಲ್ 16 (8), ಜಾನ್ಸನ್ ಅಜೇಯ 9 (5), ಮಾಲಿಂಗ ಅಜೇಯ 0 (1). ಇತರೆ 9.
ವಿಕೆಟ್ ಪತನ: 1-29, 2- 97, 3-118, 4-169, 5-169, 6-169, 187/9.
ಬೌಲಿಂಗ್: ರಾಮ್ಪಾಲ್ 4-0-35-1, ಆರ್ಪಿ ಸಿಂಗ್ 4-0-40-1, ಉನಾದ್ಕತ್ 4-0-32-0, ವಿನಯ್ ಕುಮಾರ್ 4-0-38-1, ಸಯ್ಯದ್ ಮಹಮ್ಮದ್ 4-0-43-1.
ರಾಯಲ್ ಚಾಲೆಂಜರ್ಸ್ ಬೆಂಗಳೂರು: 136/7 (20 ಓವರ್)
ಕ್ರಿಸ್ ಗೇಯ್ಲ್ ಸಿ ರಾಯುಡು ಬಿ ಹರ್ಭಜನ್ ಸಿಂಗ್ 18 (20), ತಿಲಕರತೆ ದಿಲ್ಷಾನ್ ಸಿ ಜಾನ್ಸನ್ ಬಿ ಕುಲಕರ್ಣಿ 13 (18), ವಿರಾಟ್ ಕೊಹ್ಲಿ ಸಿ ಕಾರ್ತಿಕ್ ಬಿ ಕುಲಕರ್ಣಿ 1 (4), ಡಿವಿಲಿಯರ್ಸ್ ಸಿ ಕಾರ್ತಿಕ್ ಬಿ ಕುಲಕರ್ಣಿ 2 (3), ಸೌರಭ್ ತಿವಾರಿ ಸಿ ಹರ್ಭಜನ್ ಸಿಂಗ್ ಬಿ ಸ್ಮಿತ್ 21 (19), ಅರುಣ್ ಕಾರ್ತಿಕ್ ಸ್ಟಂಪ್ಡ್ ಕಾರ್ತಿಕ್ ಬಿ ಹರ್ಭಜನ್ ಸಿಂಗ್ 12 (8), ಸಯ್ಯದ್ ಮಹಮ್ಮದ್ ಸಿ ಜಾನ್ಸನ್ ಬಿ ಸ್ಮಿತ್ 9 (11), ರಾಮ್ಪಾಲ್ ಅಜೇಯ 23 (18), ವಿನಯ್ ಕುಮಾರ್ ಅಜೇಯ 26 (20). ಇತರೆ 11.
ವಿಕೆಟ್ ಪತನ: 1-35, 2-37, 3-39, 4-43, 5-67, 6-83, 7-85.
ಬೌಲಿಂಗ್: ಜಾನ್ಸನ್ 4-0-27-0, ಮಾಲಿಂಗ 4-0-25-0, ಕುಲಕರ್ಣಿ 4-0-19-3, ಹರ್ಭಜನ್ ಸಿಂಗ್ 4-0-21-2, ಸ್ಮಿತ್ 2-0-20-2, ಪೊಲಾರ್ಡ್ 2-0-19-0.