ಅಂತರ ಕಾಲೇಜು ಟೆನಿಸ್ ಟೂರ್ನಿ
ಬೆಂಗಳೂರು: 2013-14ನೇ ಸಾಲಿನ ವಿಟಿಯು ಪುರುಷರ ಹಾಗೂ ಮಹಿಳೆಯರ ಅಂತರ ಕಾಲೇಜು ಟೆನಿಸ್ ಟೂರ್ನಿ, ಸೋಮವಾರದಿಂದ ನಗರದಲ್ಲಿ ಆರಂಭವಾಗಲಿದೆ. ರಾಮಯ್ಯ ತಾಂತ್ರಿಕ ಕಾಲೇಜು ಆವರಣದಲ್ಲಿ ಹಾಗೂ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ನ ಟೆನಿಸ್ ಅಂಕಣಗಳಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 28 ತಂಡಗಳು ಭಾಗವಹಿಸುತ್ತಿದ್ದು, ಮಹಿಳೆಯರ ವಿಭಾಗದಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಎಂ. ಎಸ್. ರಾಮಯ್ಯ ಕಾಲೇಜು ವತಿಯಿಂದ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿ ಮೇ. 4ರವರೆಗೆ ನಡೆಯಲಿದೆ.