ಅಭಿಮಾನಿಗಳ ವರ್ತನೆಗೆ ಕೊಹ್ಲಿ ಬೇಸರ
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಅಭಿಮಾನಿಗಳು ವರ್ತನೆ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಸಮಾದಾನ ವ್ಯಕ್ತಪಡಿಸಿದ್ದು, ಅಭಿಮಾನಿಗಳು ಮುಂದಿನ ದಿನಗಳಲ್ಲಿ ನಾವು ಭಾರತವನ್ನು ಪ್ರತಿನಿಧಿಸುವಾಗ ನಮಗೆ ಬೆಂಬಲ ನೀಡಬೇಕೆಂಬುದನ್ನು ಮರೆತಿದ್ದಾರೆ ಎಂದು ಕಿಡಿಕಾರಿದರು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಅಂಬಟಿ ರಾಯುಡು ಕ್ರೀಸ್ ಸೇರುವಾಗ ವಿನಯ್ ಕುಮಾರ್ ಕಾಲು ಅಡ್ಡಬಂದು ಕೊಹ್ಲಿ ಎಸೆದ ಚೆಂಡು ನೇರವಾಗಿ ವಿಕೆಟ್ಗೆ ತಾಗಿ ಬೇಲ್ಸ್ ಹಾರಿದವು. ಈ ವೇಳೆ ಆರ್ಸಿಬಿ ತಂಡದ ಆಟಗಾರರು ಔಟ್ಗಾಗಿ ಮನವಿ ಮಾಡಿದರು. ಈ ವೇಳೆ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆಗ ಆಕ್ರೋಶಗೊಂಡ ಮುಂಬೈ ಅಭಿಮಾನಿಗಳು ಕೊಹ್ಲಿಯನ್ನು ಚೀಟರ್ (ಮೋಸಗಾರ) ಎಂದು ಕರೆದರು. ಈ ವರ್ತನೆಗೆ ಬೇಸರ ವ್ಯಕ್ತಪಡಿಸಿರುವ ಕೊಹ್ಲಿ, 'ಅಲ್ಲದೆ ಈ ಹಿಂದೆ ಹಲವು ಆಟಗಾರರಿಗೆ ಈ ಅನುಭವವಾಗಿದೆ. ಐಪಿಎಲ್ ವೇಳೆ ಅಭಿಮಾನಿಗಳು ಯಾಕೆ ಇಷ್ಟೊಂದು ಕಠೋರವಾಗಿ ವರ್ತಿಸುತ್ತಾರೆ ಎಂಬುದು ತಿಳಿದಿಲ್ಲ' ಎಂದು ಕೊಹ್ಲಿ ತಿಳಿಸಿದರು.
ಬೆಂಗಳೂರು ಅಭಿಮಾನಿಗಳು ಬೆಸ್ಟ್: ಈ ನಿಟ್ಟಿನಲ್ಲಿ ಬೆಂಗಳೂರು ಪ್ರೇಕ್ಷಕರು ಶ್ರೇಷ್ಠ. ಅವರು ಯಾವುದೇ ತಂಡ ಗೆಲ್ಲಲಿ, ಆ ಆ ಐಪಿಎಲ್ ತಂಡದ ಆಟಗಾರರ ಜೊತೆಗೆ ಭಾರತೀಯ ಆಟಗಾರರನ್ನು ಗೌರವಿಸುತ್ತಾರೆ' ಎಂದು ಕೊಹ್ಲಿ ಹೇಳಿದರು.