ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂದು ಮುಂಬೈ, ಪಂಜಾಬ್ ಹಣಾಹಣಿ

Vishwanath S
Updated On : 29 Apr 2013, 12:40 pm

ಮುಂಬೈ: ತವರಿನಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ, ಸೋಮವಾರ ತವರಿನಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಆರ್‌ಸಿಬಿ ತಂಡದ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್ ತಂಡ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಉತ್ತಮ ಲಯದಲ್ಲಿರುವಂತೆ ಕಾಣುತ್ತಿದೆ.
ಕಳೆದೆರಡು ಪಂದ್ಯಗಳಿಂದ ರೋಹಿತ್ ಶರ್ಮಾ ತಂಡದ ಮುಂದಾಳತ್ವ ವಹಿಸಿಕೊಂಡಿದ್ದು, ಈ ಎರಡೂ ಪಂದ್ಯಗಳಲ್ಲಿ ಮುಂಬೈ ತಂಡ ಜಯ ಸಾಧಿಸಿದೆ.
ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಸೋಲನುಭವಿಸಿ 5ರಲ್ಲಿ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 4ರಲ್ಲಿ ಸೋಲನುಭವಿಸಿರುವ ಪಂಜಾಬ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಈ ಪಂದ್ಯವನ್ನು ಮುಂಬೈ ತಂಡ ತವರಿನಲ್ಲಿ ಆಡುತ್ತಿರುವುದರಿಂದ ಇಲ್ಲಿನ ವಾತವರಣದ ಸಂಪೂರ್ಣ ಲಾಭ ಪಡೆಯಲಿದೆ.
ಇನ್ನು ಎರಡೂ ತಂಡದ ಆಟಗಾರರ ಬಲಾಬಲವನ್ನು ನೋಡುವುದಾದರೆ ಮುಂಬೈ ತಂಡದ ಪರ ಆರಂಭಿಕ ಡ್ವೇನ್ ಸ್ಮಿತ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ನಂತರ ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ, ಪೊಲಾರ್ಡ್, ಅಂಬಟಿ ರಾಯುಡು ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಲಸಿತ್ ಮಾಲಿಂಗಾ, ಮಿಚೆಲ್ ಜಾನ್ಸನ್, ಧವಳ್ ಕಲಕರ್ಣಿ ವೇಗದ ಸಾರಥ್ಯವನ್ನು ಸಮರ್ಥವಾಗಿ ನಿಭಾಯಿಸಿದರೆ, ಸ್ಪಿನ್ ವಿಭಾಗದಲ್ಲಿ ಪ್ರಗ್ಯಾನ್ ಓಜಾ, ಹರ್ಭಜನ್ ಸಿಂಗ್ ಇದ್ದಾರೆ.
ಇನ್ನು ಪಂಜಾಬ್ ತಂಡದ ಆಟಗಾರರ ಪ್ರದರ್ಶನ ನೋಡುವುದಾರೆ ಆರಂಭಿಕರಾಗಿ ಕಣಕ್ಕಿಳಿಯುವ ಗಿಲ್‌ಕ್ರಿಸ್ಟ್ ಇದುವರೆಗೂ ತಮ್ಮ ಆರ್ಭಟ ತೋರಿಲ್ಲ. ಮಂದೀಪ್ ಸಿಂಗ್ ಉತ್ತಮ ಆರಂಭವನ್ನು ಪಡಿಯುತ್ತಿದ್ದರು ಅದನ್ನು ಬೃಹತ್ತ ಮೊತ್ತವಾಗಿ ಪರಿವರ್ತಿಸಲು ವಿಫಲವಾಗುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಪಂಜಾಬ್ ತಂಡ ಡೇವಿಡ್ ಹಸ್ಸಿ ಹಾಗೂ ಡೇವಿಡ್ ಮಿಲ್ಲರ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇವರಿಗೆ ಗುರುಕೀರ್ತ್ ಹಾಗೂ ವೊಹ್ರಾ ಉತ್ತಮ ಸಾಥ್ ನೀಡಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ರೇಯಾನ್ ಹ್ಯಾರಿಸ್ ಗಾಯದ ಸಮಸ್ಯೆಯಿಂದ ತವರಿಗೆ ಮರಳಿರುವುದು ಹಿನ್ನಡೆ ಉಂಟು ಮಾಡಿದೆ ಆದರೆ ಸ್ವಿಂಗ್ ಬೌಲರ್ ಪ್ರವೀಣ್ ಕುಮಾರ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇವರಿಗೆ ಅಜರ್ ಮಹಮದ್, ಹರ್ಮಿತ್ ಸಿಂಗ್, ಪಿಯೂಶ್ ಚಾವ್ಲಾ ಉತ್ತಮ ಸಾಥ್ ನೀಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement