ಐ-ಲೀಗ್: ಡ್ರಾ ಸಾಧಿಸಿದ ಸದರ್ನ್ ಸಮಿತಿ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐ ಲೀಗ್ 2ನೇ ಡಿವಿಷನ್ ಅಂತಿಮ ಸುತ್ತಿನ 2ನೇ ಹಂತದ ಪಂದ್ಯದಲ್ಲಿ ಸದರ್ನ್ ಸಮಿತಿ ತಂಡವು ಲ್ಯಾನ್ಸಿಂಗ್ ತಂಡದ ವಿರುದ್ಧ 2-2 ಅಂತರದ ಗೋಲುಗಳ ಡ್ರಾ ಸಾಧಿಸಿದೆ.
ಸದರ್ನ್ ಸಮಿತಿ ತಂಡದ ಪರ ಡಿವಿಡ್ 12ನೇ, ಹಾಗೂ ಫ್ರಾನ್ಸಿಸ್ 73ನೇ ನಿಮಿಷದಲ್ಲಿ ಗೋಲು ಗಳಿಸಿದರು. ಲ್ಯಾನ್ಸಿಂಗ್ ತಂಡದ ಪರ ಡೇನಿಯಲ್ 38 ಹಾಗೂ ಜೋಲ್ 56ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.