ಪ್ರಮುಖ ಸುತ್ತಿಗೆ ದಿವಿಜ್, ಪುರವ್
ಜೊಹಾನ್ಸ್ಬರ್ಗ್: ಭಾರತದ ಯುವ ಆಟಗಾರರಾದ ದಿವಿಜ್ ಶರಣ್ ಹಾಗೂ ಪುರವ್ ರಾಜಾ ಅವರು ಇಲ್ಲಿ ನಡೆಯುತ್ತಿರುವ ಎಟಿಪಿ ಸೊವೆಟೊ ಓಪನ್ನ ಅಂತಿಮ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಜಯ ಸಾಧಿಸಿದ್ದು, ಪಂದ್ಯಾವಳಿಯ ಪ್ರಮುಖ ಸುತ್ತಿಗೆ ಪ್ರವೇಶಿಸಿದ್ದಾರೆ.
ಸ್ಥಳೀಯ ಆಟಗಾರ ರುಬೆನ್ ಆಲ್ಬರ್ಟ್ ವಿರುದ್ಧ ಮೊದಲ ಸೆಟ್ನಲ್ಲಿ 6-2 ಅಂತರದಲ್ಲಿ ಮೇಲುಗೈ ಸಾಧಿಸಿದರೆ, ಎರಡನೇ ಸುತ್ತಿನಲ್ಲಿ 3-6 ಅಂತರದ ಹಿನ್ನಡೆ ಅನುಭವಿಸಿದರು. ನಂತರ ಕೊನೆಯ ಸೆಟ್ನಲ್ಲಿ 6-1 ಅಂತರದ ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.