ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ರಶಸ್ತಿ ಸುತ್ತಿಗೆ ಸಾನಿಯಾ- ಬೆಥಾನಿ

Vishwanath S
Updated On : 29 Apr 2013, 12:41 pm

ಸ್ಟಗರ್ಟ್ (ಜರ್ಮನಿ): ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅವರ ಅಮೆರಿಕಾದ ಜೋಡಿಯಾದ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್, ಡಬ್ಲ್ಯೂಟಿಎ ಪೋರ್ಶ್ ಟೆನಿಸ್ ಗ್ರಾಂಡ್ ಪ್ರಿಕ್ಸ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್ ತಲುಪಿದ್ದಾರೆ.
ಫೈನಲ್ ಪಂದ್ಯದಲ್ಲೂ ಜಯಗಳಿಸಿದರೆ, ಪ್ರಸಕ್ತ ಟೆನಿಸ್ ಋತುವಿನಲ್ಲಿ ಈ ಜೋಡಿಗೆ ಒಲಿಯುವ 3ನೇ ಪ್ರಶಸ್ತಿ ಇದಾಗಲಿದೆ.
ಇದೇ ವರ್ಷ, ಈ ಜೋಡಿ ಬ್ರಿಸ್ಪೇನ್ ಹಾಗೂ ದುಬೈ ಪಂದ್ಯಾವಳಿಗಳ ಮಹಿಳೆಯರ ಡಬಲ್ಸ್ ವಿಭಾಗಗಳ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದೀಗ, ಪೊರ್ಶ್ ಪಂದ್ಯಾವಳಿಯ ಫೈನಲ್‌ನಲ್ಲೂ ಗೆದ್ದರೆ, 795,707 ಅಮೆರಿಕನ್ ಡಾಲರ್ ಮೊತ್ತದ ಬಹುಮಾನಕ್ಕೆ ಸಾನಿಯಾ-ಬೆಥಾನಿ ಜೋಡಿ ಪಾತ್ರವಾಗಲಿದೆ.
ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು, ಸ್ಥಳೀಯ ಫೇವರಿಟ್ ಆಗಿದ್ದ ಏಂಜೆಲಿಕ್ ಕೆರ್ಬರ್ ಹಾಗೂ ಆ್ಯಂಡ್ರಿಯಾ ಪೆಟ್ರೋವಿಚ್ ಜೋಡಿಯನ್ನು 6-4, 7-5 ಸೆಟ್‌ಗಳ ಅಂತರದಲ್ಲಿ ಸೋಲಿಸಿ, ಫೈನಲ್‌ಗೆ ಕಾಲಿಟ್ಟರು.
ಸುಮಾರು ಒಂದು ಗಂಟೆ, 31 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ, ಉತ್ತಮ ಆಟ ಪ್ರದರ್ಶಿಸಿದ ಸಾನಿಯಾ ಹಾಗೂ ಬೆಥಾನಿ ಜಯ ಗಳಿಸಿದರು.
ಫೈನಲ್ ಪಂದ್ಯದಲ್ಲಿ ಸಾನಿಯಾ-ಬೆಥಾನಿ ಜೋಡಿ, ಸ್ಥಳೀಯ ಜೋಡಿ ಹಾಗೂ ಶಕ್ತಿಶಾಲಿ ಜೋಡಿಯೆಂದೇ ಬಿಂಬಿತವಾಗಿರುವ ಸಬಿನಿ ಲಿಸಿಕಿ ಹಾಗೂ ಮೋನಾ ಬಾರ್ಥೆಲ್ ಜೋಡಿಯನ್ನು ಎದುರಿಸಲಿದ್ದಾರೆ.
ಭಾನುವಾರ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಲಿಸಿಕಿ- ಬಾರ್ಥೆಲ್ ಜೋಡಿ ಡಾರ್ಜಿಯಾ ಜೂರಕ್ ಹಾಗೂ ಕಟಾಲಿನ್ ಮೊರೊಸಿ ಜೋಡಿ ವಿರುದ್ಧ 6-3, 6-4 ಸೆಟ್‌ಗಳ ಅಂತರದಲ್ಲಿ ಜಯಗಳಿಸಿ, ಫೈನಲ್‌ಗೆ ಲಗ್ಗೆಯಿಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement