ಚೆಸ್: ಆನಂದ್ಗೆ ಡ್ರಾ
ರಷ್ಯ: ತಮ್ಮ ಉತ್ತಮ ಲಯವನ್ನು ಪಡೆಯಲು ಪರದಾಡುತ್ತಿದ್ದ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಅಲೆಖಿನ್ ಮೆಮೊರಿಯಲ್ ಚೆಸ್ ಪಂದ್ಯಾವಳಿಯ ಎರಡನೇ ಹಂತದಲ್ಲಿ ಉತ್ತಮ ಆರಂಭವನ್ನು ಪಡೆದಿದ್ದು, ವ್ಲಾಡ್ಮಿರ್ ಕ್ರಾಮ್ನಿಕ್ ವಿರುದ್ಧ ಡ್ರಾ ಸಾಧಿಸಿದ್ದಾರೆ. ಮೊದಲ ಹಂತದಲ್ಲಿ ಚೀನಾದ ಡಿಂಗ್ ಲಿರೆನ್ ವಿರುದ್ಧ ಜಯ ಸಾಧಿಸಿದ್ದ ಆನಂದ್, ಸೋಮವಾರ ನಡೆದ 6ನೇ ಸುತ್ತಿನ ಪಂದ್ಯದಲ್ಲಿ ಕ್ರಾಮ್ನಿಕ್ ವಿರುದ್ಧ ಡ್ರಾ ಸಾಧಿಸಿದ್ದಾರೆ. ಇನ್ನು ಉಳಿದ ಮೂರು ಸುತ್ತಿನಲ್ಲಿ ಭಾರತದ ಚೆಸ್ ತಾರೆ ಎರಡು ಬಿಳಿಕಾಯಿ ಪಂದ್ಯಗಳನ್ನು ಹೊಂದಿದ್ದು, ಇದರ ಲಾಭ ಪಡೆಯುವ ನಿರೀಕ್ಷೆಗಳಿವೆ.