ರಾರಾಜಿಸಿದ ರಾಜಸ್ಥಾನ
ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಜೈಪುರ: ಸ್ಯಾಮ್ಸನ್ ಅವರ ಸಮರ್ಥವಾದ ಬ್ಯಾಟಿಂಗ್ ಹಾಗೂ ಶೇನ್ ವ್ಯಾಟ್ಸನ್ ಅವರ ಆಲ್ರೌಂಡ್ ಪ್ರದರ್ಶನ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮುಳುವಾಯಿತು. ಪರಿಣಾಮ ರಾಜಸ್ಥಾನ್ ರಾಯಲ್ಸ್ ತಂಡ ಆರ್‌ಸಿಬಿ ವಿರುದ್ಧ ಕೊನೆ ಓವರ್‌ನಲ್ಲಿ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡ ಪ್ರತಿ ಹೆಜ್ಜೆಯಲ್ಲೂ ತಮ್ಮ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಆರ್‌ಸಿಬಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿನವ್ ಮುಕುಂದ್ ಹಾಗೂ ಕ್ರಿಸ್ ಗೇಯ್ಲ್ ತಂಡಕ್ಕೆ ಸ್ಫೋಟಕ ಆರಂಭವನ್ನು ನೀಡಿದರು. ಈ ಜೋಡಿ 4 ಓವರ್‌ಗಳಲ್ಲಿ 44 ರನ್ ಪೇರಿಸಿತ್ತು.
ಈ ವೇಳೆ ಅಬ್ಬರಿಸುತ್ತಿದ್ದ ಕ್ರಿಸ್ ಗೇಯ್ಲ್ (34) ಅವರಿಗೆ ಶೇನ್ ವ್ಯಾಟ್ಸನ್ ಪೆವಿಲಿಯನ್ ದಾರಿ ತೋರಿದರು. ನಂತರ ಮುಕುಂದ್ (19), ಕೊಹ್ಲಿ (32), ಡಿವಿಲಿಯರ್ಸ್ (21), ಹೆನ್ರಿಕೇಸ್ (22) ರನ್‌ಗಳಿಸಿ ಉತ್ತಮ ಆರಂಭ ಪಡೆದರಾದರು ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲರಾದರು. ಆದರೆ ಕೊನೆಯ ಆರು ಎಸೆತಗಳನ್ನು ಎದುರಿಸಿದ ವಿನಯ್ ಕುಮಾರ್ 22 ರನ್‌ಗಳಿಸಿ, ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ರಾಜಸ್ಥಾನ ಪರ 3 ವಿಕೆಟ್ ಪಡೆಯುವ ಮೂಲಕ ವ್ಯಾಟ್ಸನ್ ಆರ್‌ಸಿಬಿಗೆ ಮಾರಕವಾದರು.
ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲೂ ಪರಿಣಾಮಕಾರಿ ಪ್ರಯೋಗ ನಡೆಸಿತು. ರಾಹುಲ್ ದ್ರಾವಿಡ್ ಹಾಗೂ ರಹಾನೆ ಆರಂಭಿಕರಾಗಿ ಕಣಕ್ಕಿಳಿಯುವ ಮೂಲಕ ಶೇನ್ ವಾಟ್ಸನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ತಂತ್ರ ರೂಪಿಸಿತು. ಆರಂಭದಲ್ಲೇ ರಹಾನೆ ವಿಕೆಟ್ ಕಳೆದುಕೊಂಡಾಗ ರಾಜಸ್ಥಾನ ತಂಡ ವಿಕೆಟ್ ಕೀಪರ್ ಸ್ಯಾಮ್ಸನ್ ಅವರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿತು. ಈ ಐಪಿಎಲ್ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡಿ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸ್ಯಾಮ್ಸನ್ 41 ಎಸೆತಗಳಲ್ಲಿ 63 ರನ್‌ಗಳಿಸಿದರು. ಬೌಲಿಂಗ್‌ನಲ್ಲಿ ಮಿಂಚಿದ್ದ ವ್ಯಾಟ್ಸನ್ ಬ್ಯಾಟಿಂಗ್‌ನಲ್ಲೂ ಅದೇ ಪ್ರದರ್ಶನ ನೀಡಿದರು. 31 ಎಸೆತಗಳನ್ನೆದುರಿಸಿದ ವ್ಯಾಟ್ಸನ್ 41 ರನ್‌ಗಳಿಸಿದರು.
ಕೊನೆ ಓವರ್‌ನಲ್ಲಿ ಆರ್‌ಸಿಬಿ ಮತ್ತೆ ರೋಚಕ ಹೋರಾಟ ನಡೆಸಿತು. 6 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ, ಆ ಓವರ್‌ನ 2ನೇ ಎಸೆತದಲ್ಲಿ ಹಾಡ್ಜ್ ಔಟಾದರು, ನಂತರದ ಎಸೆತದಲ್ಲಿ ಓವೈಸ್ ಶಾ ರನೌಟ್ ಆಗುವ ಮೂಲಕ ರೋಚಕ ತಿರುವು ಪಡೆಯಿತು ಆದರೆ 5ನೇ ಎಸೆತದಲ್ಲಿ ಬೌಂಡರಿ ಗಳಿಸಿದ ಬಿನ್ನಿ ರಾಜಸ್ಥಾನ ತಂಡಕ್ಕೆ ಜಯ ತಂದರು.
ಕೊಹ್ಲಿ 2000: ರಾಜಸ್ಥಾನದ ವಿರುದ್ಧ 32 ರನ್‌ಗಳಿಸಿದ ಕೊಹ್ಲಿ ಇದುವರಿಗಿನ ಐಪಿಎಲ್ ಪಂದ್ಯಾವಳಿಯಲ್ಲಿ 2000 ರನ್‌ಗಳನ್ನು ಪೂರೈಸಿದರು. ಈ ಮೂಲಕ 2000 ರನ್ ಗಡಿ ದಾಟಿದ 9ನೇ ಆಟಗಾರ ಹಾಗೂ ಭಾರತದ 7ನೇ ಆಟಗಾರ ಎನಿಸಿಕೊಂಡರು.
ಸ್ಕೋರ್ ಬೋರ್ಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 171/6 (20 ಓವರ್)
ಮುಂಕುಂದ್ ಬಿ ತ್ರಿವೇದಿ 19 (21), ಗೇಯ್ಲ್ ಸಿ ಸ್ಯಾಮ್ಸನ್ ಬಿ ವ್ಯಾಟ್ಸನ್ 34 (16), ಕೊಹ್ಲಿ ಸಿ ಫಾಕ್ನರ್ ಬಿ ವ್ಯಾಟ್ಸನ್ 32 (35), ಡಿವಿಲಿಯರ್ಸ್ ಸಿ ಫಾಕ್ನರ್ ಬಿ ಶ್ರೀಶಾಂತ್ 21 (13), ಹೆನ್ರಿಕೇಸ್ ರನೌಟ್ (ಫಾಕ್ನರ್/ಸ್ಯಾಮ್ಸನ್) 22 (19), ತಿವಾರಿ ಅಜೇಯ 8 (8), ರಾಮ್‌ಪಾಲ್ ಸಿ ಸ್ಯಾಮ್ಸನ್ ಬಿ ವ್ಯಾಟ್ಸನ್ 3(4), ವಿನಯ್ ಕುಮಾರ್ ಅಜೇಯ 22 (6), ಇತರೆ 10.
ವಿಕೆಟ್ ಪತನ: 1-44, 2-66, 3-99, 4-123, 5-145, 6-149
ಬೌಲಿಂಗ್: ಚಂಡಿಲಾ 4-0-39-0, ಫಾಕ್ನರ್ 4-0-42-0, ಶ್ರೀಶಾಂತ್ 4-1-35-1, ವ್ಯಾಟ್ಸನ್ 4-0-22-3, ತ್ರಿವೇದಿ 3-0-20-1, ಬಿನ್ನಿ 1-0-8-0
ರಾಜಸ್ಥಾನ್ ರಾಯಲ್ಸ್ 173/6 (19.5 ಓವರ್)
ದ್ರಾವಿಡ್ ಬಿ ಹೆನ್ರಿಕೇಸ್ 22 (17), ರಹಾನೆ ಸಿ ಆರ್.ಪಿ ಸಿಂಗ್ ಬಿ ರಾಮ್‌ಪಾಲ್ 2 (7), ಸ್ಯಾಮ್ಸನ್ ಸಿ ಕಾರ್ತಿಕ್ ಬಿ ರಾಮ್‌ಪಾಲ್ 63 (41), ವ್ಯಾಟ್ಸನ್ ಸಿ ಡಿವಿಲಿಯರ್ಸ್ ಬಿ ಆರ್.ಪಿ ಸಿಂಗ್ 41 (31), ಹಾಡ್ಜ್ ಬಿ ವಿನಯ್ ಕುಮಾರ್ 32 (18), ಬಿನ್ನಿ ಅಜೇಯ 6 (3), ಶಾ ರನೌಟ್ (ಕೊಹ್ಲಿ/ಡಿವಿಲಿಯರ್ಸ್) 1(1), ಫಾಕ್ನರ್ ಅಜೇಯ 1(1), ಇತರೆ 5.
ವಿಕೆಟ್ ಪತನ: 1-21, 2-48, 3-116, 4-162, 5-167, 6-168
ಬೌಲಿಂಗ್: ರಾಮ್‌ಪಾಲ್ 4-1-28-2, ಆರ್.ಪಿ ಸಿಂಗ್ 4-0-35-1, ವಿನಯ್ 3.5-0-39-1, ಹೆನ್ರಿಕೇಸ್ 2-0-6-1, ಕಾರ್ತಿಕ್ 3-0-32-0, ಉನಾದ್ಕತ್ 3-0-30-0
ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್