ಹರಾರೆ ಟೆಸ್ಟ್: ಜಿಂಬಾಬ್ವೆಗೆ ಸೋಲು
ಹರಾರೆ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹರಾರೆ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ 143 ರನ್ಗಳ ಸೋಲು ಕಂಡಿದೆ. ಗೆಲವಿಗಾಗಿ 401 ರನ್ ಗುರಿಯನ್ನು ಬೆನ್ನಟ್ಟಲು ಭಾನುವಾರ ಕ್ರೀಸ್ಗೆ ಇಳಿದಿದ್ದ ಜಿಂಬಾಬ್ವೆ, ದಿನಾಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತ್ತು. ಸೋಮವಾರ ತನ್ನ ಇನಿಂಗ್ಸ್ ಮುಂದುವರೆಸಿದ ಅದು, 257 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡಿತು. ಬಾಂಗ್ಲಾ ಬೌಲರ್ಗಳಾದ ಜಿಯಾರ್ ರಹಮಾನ್ ಹಾಗೂ ಶಕಿಬ್ ಅಲ್ ಹಸನ್ ಕ್ರಮವಾಗಿ 4 ಹಾಗೂ 3 ವಿಕೆಟ್ ಪಡೆದು, ಬಾಂಗ್ಲಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಿಂಬಾಬ್ವೆ ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 111 ರನ್ ಗಳಿಸಿದ ಹ್ಯಾಮಿಲ್ಟನ್ ಮಸಕಾದ್ಸಾ ಅವರ ಶತಕ ವ್ಯರ್ಥವಾಯಿತು. ಈ ಪಂದ್ಯದಲ್ಲಿ ಗಳಿಸಿದ ಜಯದಿಂದಾಗಿ, ಪ್ರವಾಸಿ ಬಾಂಗ್ಲಾದೇಶ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾ ಪ್ರಥಮ ಇನಿಂಗ್ಸ್ 391
ಜಿಂಬಾಬ್ವೆ ಪ್ರಥಮ ಇನಿಂಗ್ಸ್ 282
ಬಾಂಗ್ಲಾ ದ್ವಿತೀಯ ಇನಿಂಗ್ಸ್ 291/9 (ಡಿ)
ಜಿಂಬಾಬ್ವೆ ದ್ವಿತೀಯ ಇನಿಂಗ್ಸ್ 257 (95.3 ಓವರ್)
(ಭಾನುವಾರ ದಿನಾಂತ್ಯಕ್ಕೆ 138/4)
ಹ್ಯಾಮಿಲ್ಟನ್ ಮಸಕಾದ್ಸಾ ಅಜೇಯ 111, ಸಿಬಂದಾ 32
ಬೌಲಿಂಗ್: ಜಿಯಾರ್ ರಹಮಾನ್ 63/4, ಶಕೀಬ್ ಅಲ್ ಹಸನ್ 52/3
ಪಂದ್ಯಶ್ರೇಷ್ಠ: ಮಷ್ಫೀಕರ್ ರಹೀಂ (ಬಾಂಗ್ಲಾದೇಶ
ಸರಣಿ ಶ್ರೇಷ್ಠ: ರಬಿವುಲ್ ಇಸ್ಲಾಂ (ಬಾಂಗ್ಲಾದೇಶ)