ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ನಿರಾಸೆ
ನವದೆಹಲಿ: ಮಂಗಳವಾರ ನಡೆದ ಮಲೇಷ್ಯಾ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತೀಯರು ನಿರಾಸೆಗೊಳಗಾದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ ರಿತುಪರ್ಣ ದಾಸ್ ಹಾಗೂ ರುತ್ವಿಕಾ ಶಿವಾನಿ ಇಬ್ಬರೂ ತಮ್ಮ ಪಂದ್ಯಗಳಲ್ಲಿ ಸೋತು ಪಂದ್ಯಾವಳಿಯಿಂದ ಆಚೆ ಸರಿದರು.
ಜಪಾನ್ನ ಅಯಾ ಒಹೊರಿ ವಿರುದ್ಧ ಸೆಣೆಸಿದ ರಿತುಪರ್ಣ, 22-20, 7-20, 21-23 ಅಂತರದಲ್ಲಿ ಸೋಲು ಕಂಡರೆ, ಶಿವಾನಿ ಅವರು ಜಪಾನ್ನ ಅಯುಮಿ ಮಿನೆ ಅವರ ವಿರುದ್ಧ 16-21, 18-21 ಅಂತರದಲ್ಲಿ ಪರಾಭವಗೊಂಡರು.
ಇನ್ನು, ಪುರುಷರ ಡಬಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ್ದ ಭಾರತದ ಜೋಡಿಯಾದ ಗುರು ಪ್ರಸಾದ್ ಹಾಗೂ ವಿನೀತ್ ಮಾನ್ಯಲ್, ಮಲೇಷ್ಯಾದ ಮಹಮದ್ ರಜಿಫ್ ಅಬ್ದುಲ್ ಹಾಗೂ ಮಹಮ್ಮದ್ ಹಫೀಸ್ ಹಷೀಂ ಅವರ ವಿರುದ್ಧ 7-21, 12-21 ಅಂತರದಲ್ಲಿ ಸೋತರು.