ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಖೇಲ್ ರತ್ನಕ್ಕೆ ಗಿರೀಶ್ ಹೆಸರು

Mainashree
Updated On : 1 May 2013, 11:45 am

ನವದೆಹಲಿ: ಲಂಡನ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಕರ್ನಾಟಕದ ಅಥ್ಲೀಟ್ ಎಚ್.ಎನ್ ಗಿರೀಶ್ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಕರ್ನಾಟಕದ ಗಿರೀಶ್ ಲಂಡನ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹೈ ಜಂಪ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈ ಮೊದಲು ಗಿರೀಶ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಖೇಲ್ ರತ್ನ ಪ್ರಶಸ್ತಿಗೆ ಪ್ಯಾರಾಲಿಂಪಿಕ್ಸ್ ಅಥ್ಲೀಟ್ ಎಚ್.ಎನ್ ಗಿರೀಶ್ ಮತ್ತು ಹಾಕಿ ಆಟಗಾರ  ಸಂದೀಪ್ ಸಿಂಗ್ ಅವರ ಹೆಸರುಗಳನ್ನು ಸ್ವೀಕರಿಸಿತ್ತು. ಈ ಬಾರಿ, ಅರ್ಜುನ ಪ್ರಶಸ್ತಿಗೆ ರಾಷ್ಟ್ರೀಯ ಫೆಡರೇಷನ್ಗಳು 50ರಿಂದ 60 ಕ್ರೀಡಾಪಟುಗಳ ಹೆಸರುಗಳು ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ 30ರಿಂದ 40 ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.
ಕೊಹ್ಲಿ, ಗವಾಸ್ಕರ್ ಹೆಸರು: ಬಿಸಿಸಿಐ ಸಂಸ್ಥೆ ಅರ್ಜುನ್ ಪ್ರಶಸ್ತಿಗೆ ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗೆ ಸುನಿಲ್ ಗವಾಸ್ಕರ್ ಹೆಸರನ್ನು ನಾಮನಿರ್ದೇಶನ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement