ಚಾಂಪಿಯನ್ಸ್ ಲೀಗ್ಗೆ ತೆರಿಗೆ
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಮನರಂಜನಾ ತೆರಿಗೆಯಡಿಗೆ ತಂದ ತಮಿಳುನಾಡು ಸರ್ಕಾರ, ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೂ ಮನರಂಜನಾ ತೆರಿಗೆ ವಿಧಿಸಲು ಮಂಗಳವಾರ ಪ್ರಸ್ತಾಪಿಸಿದೆ.
ಇದಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಸಚಿವ ಬಿ.ವಿ ರಮಣಾ, ತಮಿಳುನಾಡು ಮನರಂಜನಾ ತರಿಗೆ ಕಾಯ್ದೆ 1939ಕ್ಕೆ ತಿದ್ದುಪಡಿ ತರಲು ಅಲ್ಲಿನ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕ್ರಿಕೆಟ್ ಆಡುವ ಪ್ರಮುಖ ರಾಷ್ಟ್ರಗಳ ಅಗ್ರ ದೇಶಿ ತಂಡಗಳ ನಡುವೆ ನಡೆಯುವ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯನ್ನು ಬಿಸಿಸಿಐ ನಡೆಸುತ್ತಿದೆ.
2011ರಲ್ಲಿ ತಮಿಳುನಾಡು ಸರ್ಕಾರ ಐಪಿಎಲ್ ಪಂದ್ಯಾವಳಿಗೆ ಮನರಂಜನಾ ತೆರಿಗೆ ವಿಧಿಸಲು ನಿರ್ಧರಿಸಿತ್ತು.