ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಾರಿಯರ್ಸ್‌ಗೆ ಸವಾಲಾದ ರೈನಾ

Mainashree
Updated On : 30 Apr 2013, 10:18 am

ಪುಣೆ: ಸುರೇಶ್ ರೈನಾ (63) ಅರ್ಧ ಶತಕ ಮತ್ತು ಎಸ್. ಬದ್ರೀನಾಥ್ (34) ಅವರ ತಾಳ್ಮೆಯ ಜತೆಯಾಟದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪುಣೆ ವಾರಿಯರ್ಸ್‌ಗೆ 165ರನ್‌ಗಳ ಸ್ಪರ್ಧಾತ್ಮಕ ಸವಾಲೊಡ್ಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಹೇಂದ್ರ ಸಿಂಗ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪಡೆ, ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 164 ರನ್ ಕಲೆ ಹಾಕಿತು.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಪುಣೆ ವಾರಿಯರ್ಸ್ ಇನಿಂಗ್ಸ್ ಆರಂಭವಾಗಿರಲಿಲ್ಲ. ಆರಂಭಿಕರಾಗಿ ಅಂಗಣಕ್ಕಿಳಿದ ಮೈಕಲ್ ಹಸ್ಸಿ (5) ಮತ್ತು ವೃದ್ಧಿಮಾನ್ ಸಾಹಾ (13) ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವೈಫಲ್ಯ ಕಂಡಿತು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿತ್ತು.
ಆದರೆ, ನಂತರ ಬಂದ ರೈನಾ ಮತ್ತು ಬದ್ರೀನಾಥ್ ಜತೆಯಾಗಿ ತಾಳ್ಮೆಯ ಆಟ ಪ್ರದರ್ಶಿಸುವ ಮೂಲಕ 3ನೇ ವಿಕೆಟ್‌ಗೆ 75 ರ್ ಕಲೆ ಹಾಕಿದರು. ಇದು ತಂಡದ ಮೊತ್ತ 160 ರನ್‌ಗಳ ಗಡಿ ದಾಟುವಂತೆ ನೋಡಿಕೊಂಡಿತು. 50 ಎಸೆತಗಳನ್ನು ಎದುರಿಸಿದ ರೈನಾ ಮೊತ್ತದಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು.
ಆದರೆ, 16ನೇ ಓವರ್‌ನಲ್ಲಿ ಲೂಕ್ ರೈಟ್ ಬೌಲಿಂಗ್‌ನಲ್ಲಿ ಬದ್ರೀನಾಥ್ ಅವರು ಸ್ಮಿತ್‌ಗೆ ಕ್ಯಾಚ್ ನೀಡಿದ್ದರಿಂದ ಇಬ್ಬರ ಜತೆಯಾಟ ಮುರಿಯಿತು.
ಆಗ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ (45) ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗುವ ಮೂಲಕ ಸುರೇಶ್ ರೈನಾ ಅವರೊಂದಿಗೆ ಮುರಿಯದ ಜತೆಯಾಟದಲ್ಲಿ 61ರನ್ ಕಲೆಹಾಕಿದರು. ಧೋನಿ ಮೊತ್ತದಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು.
ಮೊದಲ ಹತ್ತು ಓವರ್‌ಗಳಲ್ಲಿ ರನ್‌ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ಪುಣೆ ವಾರಿಯರ್ಸ್ ಬೌಲರ್‌ಗಳು, ನಂತರದ 10 ಓವರ್‌ಗಳಲ್ಲಿ ಮೊನಚಾದ ಬೌಲಿಂಗ್ ಪ್ರದರ್ಶಿಸುವಲ್ಲಿ ವಿಫಲವಾದರು. ಪುಣೆ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ರಾಹುಲ್ ಶರ್ಮಾ, ಕೇನ್ ರಿಚರ್ಡ್ಸ್‌ನ್ ಹಾಗೂ ಲೂಕ್ ರೈಟ್ ತಲಾ 1 ವಿಕೆಟ್ ಪಡೆದರು.
ಸ್ಕೋರ್ ಬೋರ್ಡ್ (ಅಪೂರ್ಣ)
ಚೆನ್ನೈ ಸೂಪರ್ ಕಿಂಗ್ಸ್ 164/3 (20ಓವರ್)
ಹಸ್ಸಿ    ಬಿ ರಿಚಡ್‌ಸನ್    5(8),
ವೃದ್ಧಿಮಾನ್    ಎಲ್‌ಬಿ ಬಿ ಶರ್ಮಾ    13(15),
ರೈನಾ    ಅಜೇಯ    63 (50),
ಬದ್ರಿನಾಥ್    ಸಿ ಸ್ಮಿತ್ ಬಿ ರೈಟ್    34 (31),
ಧೋನಿ    ಅಜೇಯ    45(16),
ಇತರೆ     4
ವಿಕೆಟ್ ಪತನ: 1-6, 2-28, 3-103
ಬೌಲಿಂಗ್:
ಶರ್ಮಾ    4-0-27-1,
ಭುವನೇಶ್ವರ್    4-1-24-0,
ರಿಚಡ್‌ಸನ್    4-0-35-1,
ದಿಂಡಾ    4-0-41-0,
ನಾಯರ್    3-0-23-0,
ರೈಟ್    1-0-12-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement