ಸೈನಾಗೆ ಪ್ರಶಸ್ತಿ
ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ 22ನೇ ಯಧುವೀರ್ ಸ್ಮಾರಕ ಫೌಂಡೇಷನ್ ಪ್ರಶಸ್ತಿ ನೀಡಲಾಗಿದೆ.
ಸ್ವತಂತ್ರ ಯೋಧ, ಪತ್ರಕರ್ತ ಹಾಗೂ ಹಿಂದಿ ದಿನಪತ್ರಿಕೆ 'ಮಿಲಾಪ 'ಸಂಸ್ಥಾಪಕ ಯಧುವೀರ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಆಂಧ್ರ ಪ್ರದೇಶ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಸುಭಾಷನ್ ರೆಡ್ಡಿ ಅವರು ಮಂಗಳವಾರ ಸೈನಾಗೆ ನೀಡಿದರು.