ಕ್ರೀಡೆ

ಗೆಲುವಿನ ಹುಮ್ಮಸ್ಸಿನಲ್ಲಿ ಭಾರತ

ಮುಂಬೈ: ವಿಂಡೀಸ್ ವನಿತೆಯರ ವಿರುದ್ಧ 105 ರನ್‌ಗಳ ಅಂತರದಿಂದ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ವನಿತೆಯರ ತಂಡ, ಭಾನುವಾರ ವಿಶ್ವಕಪ್‌ನ ತಮ್ಮ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ, ಮಿಥಾಲಿ ರಾಜ್ ನಾಯಕತ್ವದ ಅತಿಥೇಯ ಭಾರತ ತಂಡ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ತನ್ನ ಎರಡನೇ ವಿಜಯ ದಾಖಲಿಸಲಿದೆ.
ವಿಂಡೀಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿಯಾದ ತಿರುಶ್‌ಕಾಮಿನಿ ಮುರುಗೇಶನ್ ಮತ್ತು ಪೂನಂ ರೌತ್ ಮೊದಲ ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿತ್ತು. ಹೀಗಾಗಿ ಭಾರತ ಎದುರಾಳಿ ವಿಂಡೀಸ್ ಬೃಹತ್ ಮೊತ್ತ ಒಡ್ಡಲು ಸಾಧ್ಯವಾಗಿತ್ತು. ಈ ಜೋಡಿ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮೋಡಿ ಮಾಡುವ ಭರವಸೆ ಹೊತ್ತಿಸಿದೆ.
ಇನ್ನೊಂದೆಡೆ ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಇಂಗ್ಲೆಂಡ್‌ಗೆ ಸೋಲುಣಿಸಿತ್ತು. ಲಂಕಾ ವಿರುದ್ಧ ಒಂದು ವಿಕೆಟ್ ಅಂತರದಿಂದ ಸೋಲನುಭವಿಸಿರುವ ಇಂಗ್ಲೆಂಡ್ ಭಾರತದ ವಿರುದ್ಧ ಒತ್ತಡ ಅನುಭವಿಸುತ್ತಿರುವುದು ಸಹಜವಾಗಿದೆ. ಹೀಗಾಗಿ ಚಾರ್ಲೋಟೆ ಎಡ್ವರ್ಡ್ಸ್ ನಾಯಕತ್ವದ ಇಂಗ್ಲೆಂಡ್ ಭಾರತದ ವಿರುದ್ಧ ಉತ್ತಮ ಪ್ರದರ್ಶನ ತೋರುವ ಮೂಲಕ ಲಯಕ್ಕೆ ಮರಳಲು ಎದುರು ನೋಡುತ್ತಿದೆ.
2009ರಲ್ಲಿ ವಿಶ್ವಕಪ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ದುರ್ಬಲವಾಗಿದ್ದು, ತಂಡದ ಮೇಲೆ ಹೆಚ್ಚಿನ ಒತ್ತಡ ಹೇರುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ ಭಾರತ ತಂಡದ ನಾಯಕಿ ಮಿಥಾಲಿ ರಾಜ್. 'ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಆದರೆ, ಅದರ ಬೌಲಿಂಗ್ ಪಡೆ ತುಂಬಾ ದುರ್ಬಲವಾಗಿದೆ. ಕಥೆರಿನ್ ಬ್ರಂಟ್ ಮೇಲೆ ಇಂಗ್ಲೆಂಡ್ ಹೆಚ್ಚು ಅವಲಂಬಿತವಾಗಿದೆ. ಕಳೆದ ವರ್ಷ ನಾವು ಇಂಗ್ಲೆಂಡ್ ವಿರುದ್ಧ ಆಡಿದ್ದೇವೆ. ಅವರ ಬೌಲರ್‌ಗಳನ್ನು ಎದುರಿಸುವ ಸಂಪೂರ್ಣ ವಿಶ್ವಾಸ ಹೊಂದಿದ್ದೇವೆ. ಅಲ್ಲದೇ ನಾವು ಸುಸಜ್ಜಿತ ತಯಾರಿ ಮಾಡಿಕೊಂಡಿದ್ದೇವೆ' ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.
ನಿಯಮದ ಪ್ರಕಾರ ಒಂದು ಗುಂಪಿನಿಂದ ಒಂದು ತಂಡ ಹೊರಗೆ ಹೋಗಲೇಬೇಕು. ಪಂದ್ಯದಲ್ಲಿ ಒಂದು ವೇಳೆ ಭಾರತ ಸೋತರೆ, ಇಂಗ್ಲೆಂಡ್ ಅವಕಾಶ ಜೀವಂತವಾಗಿ ಉಳಿಯಲಿದೆ. ಇನ್ನೊಂದು ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಲಂಕಾ ವಿರುದ್ಧ ಜಯ ಸಾಧಿಸಿದರೆ, ಗುಂಪಿನ ಎಲ್ಲ ತಂಡಗಳೂ ಒಂದು ಪಂದ್ಯದಲ್ಲಿ ಜಯ ಕಂಡುಕೊಂಡಂತಾಗುತ್ತದೆ. 'ವೆಸ್ಟ್ ಇಂಡೀಸ್ ವಿರುದ್ಧ ಭಾರತ ಉತ್ತಮ ಪ್ರದರ್ಶನ ತೋರಿದೆ. ಆದರೆ, ಭಾನುವಾರ ಕೊಂಚ ಭಿನ್ನವಾಗಿದೆ. ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ನೀಡುವ ಮೂಲಕ ಲಯಕ್ಕೆ ಮರಳಲಿದ್ದೇವೆ. ಈ ಹಿಂದೆ ಸಹ ನಾವು ಭಾರತದ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದು, ಅದನ್ನೇ ಮರಕಳಿಸುವ ಭರವಸೆ ಹೊಂದಿದ್ದೇವೆ' ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕಿ.
146 ಎಸೆತಗಳಲ್ಲಿ 100 ರನ್ ಗಳಿಸಿದ ತಿರುಶ್‌ಕಾಮಿನಿ ಮತ್ತು 94 ಎಸೆತಗಳಲ್ಲಿ 72 ರನ್ ಗಳಿಸಿದ ಪೂನಂ ಅವರಿಗೆ ಉತ್ತಮ ಸಾಥ್ ನೀಡಿದ್ದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಮತ್ತು ಹರ್ಮನ್‌ಪ್ರೀತ್ ಕೌರ್, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಲು ಕಾರಣವಾಗಿದ್ದರು.
ಇದೇ ರೀತಿ ಇಂಗ್ಲೆಂಡ್ ವಿರುದ್ಧ ಭಾರತದ ಗಟ್ಟಿತದ ಬ್ಯಾಟಿಂಗ್ ಪ್ರದರ್ಶನವನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ, ಬ್ರಂಟ್ ಹೊರತುಪಡಿಸಿ ಇಂಗ್ಲೆಂಡ್ ಬೌಲರ್‌ಗಳು ಶ್ರೀಲಂಕಾ ವಿರುದ್ಧ ವೈಫಲ್ಯ ಕಂಡಿರುವುದು ಭಾರತದ ವಿಶ್ವಾಸ ಹೆಚ್ಚಿಸಿದೆ. ಇನ್ನು ಭಾರತದ ಬೌಲಿಂಗ್‌ನಲ್ಲಿ ಅಮಿತಾ ಶರ್ಮಾ ಅವರೊಂದಿಗೆ ಜೂಲನ್ ಮಿಂಚುವುದರೊರಂದಿಗೆ, ಮಧ್ಯಮ ವೇಗದ ನಿರಂಜನಾ ನಾಗರಾಜನ್ ಮತ್ತು ಅನುಭವಿ ಸ್ಪಿನ್ನರ್ ಗೌಹರ್ ಸುಲ್ತಾನ್ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಹಂಚಿಕೊಂಡಿದ್ದರು. ಇನ್ನು ಲಂಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ರನ್ ಗಳಿಸಲು ತಿಣುಕಾಡಿದ್ದ ಇಂಗ್ಲೆಂಡ್ ತಂಡ, ಒಂದು ಹಂತದಲ್ಲಿ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ, ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿತ್ತು.
ಇನ್ನು ಲಂಕಾ ವಿರುದ್ಧದ ಪಂದ್ಯದ ಫೀಲ್ಡಿಂಗ್‌ನಲ್ಲಿ ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು, ಇಂಗ್ಲೆಂಡ್ ಸೋಲಿಗೆ ಮುಳುವಾಗಿತ್ತು. ಪಂದ್ಯ ಗೆಲ್ಲಿಸಿಕೊಟ್ಟ ಲಂಕಾದ ಕೌಶಲ್ಯಾ ಲೋಕಸೂರ್ಯ ಅವರು 9 ರನ್ ಗಳಿಸಿದಾಗ, ಕ್ಯಾಚ್ ಬಿಟ್ಟಿದ್ದು ಇಂಗ್ಲೆಂಡ್ ಪಂದ್ಯದಲ್ಲ ಮಾಡಿದ ದೊಡ್ಡ ಪ್ರಮಾದವೆನಿಸಿತ್ತು. ಸ್ನಾಯು ಸೆಳೆತದಿಂದ ಲಂಕಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಇಂಗ್ಲೆಂಡ್ ವಿಕೆಟ್ ಕೀಪರ್ ಮತ್ತು ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ಸರಾ ಟೇಲರ್ ಭಾರತದ ವಿರುದ್ಧ ಫಿಟ್ ಆಗಲಿದ್ದಾರೆ ಎಂಬ ವಿಶ್ವಾಸವನ್ನು ತಂಡ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ