ಕ್ರೀಡೆ

ಲಿಯಾಂಡರ್- ಪುರವ ವಿಜಯ

ನವದೆಹಲಿ: ಅನನುಭವಿ ಪುರವ ರಾಜಾ ಅವರೊಂದಿಗೆ ತಮ್ಮ ಅನುಭವವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು, ಡಬಲ್ಸ್‌ನಲ್ಲಿ ಪ್ರದರ್ಶನ ನೀಡಿದ ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಡೇವಿಸ್ ಕಪ್‌ನಲ್ಲಿ ಗೆಲ್ಲುವ ಭರವಸೆಯನ್ನು ಜೀವಂತ ಉಳಿಸಿದ್ದಾರೆ.
ಗೆಲ್ಲಲೇಬೇಕಾಗಿದ್ದ ಡಬಲ್ಸ್ ಪಂದ್ಯದಲ್ಲಿ ಕೊರಿಯಾ ಆಟಗಾರರ ವಿರುದ್ಧ ಅಮೋಘ ಪ್ರದರ್ಶನ ತೋರಿದ ಲಿಯಾಂಡರ್ ಪೇಸ್ ಅತಿಥೇಯ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದ್ದಾರೆ.
ಪೂರವ ರಾಜಾ ಅವರೊಂದಿಗೆ ಇದೇ ಮೊದಲ ಬಾರಿಗೆ ಡಬಲ್ಸ್‌ನಲ್ಲಿ ಜತೆಯಾಗಿ ಆಡಿದ ಪೇಸ್, ಎರಡು ಗಂಟೆ 30 ನಿಮಿಷಗಳಿಗೂ ಅಧಿಕ ಕಾಲ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಯಾಂಗ್ ಕು ಲಿಮ್ ಮತ್ತು ಜಿ ಸಂಗ್ ನಾಮ್ ಜೋಡಿಯನ್ನು 6-4, 7-5, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿತು.
ಮೊದಲ ದಿನ ನಡೆದ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಕೊರಿಯಾ ಆಟಗಾರರು ನೀಡಿದ್ದ ಪ್ರದರ್ಶನವನ್ನು ನೋಡಿದ್ದ ಭಾರತ ತಂಡದ ಆಟಗಾರರು, ಪಂದ್ಯದಲ್ಲಿ ಸುಲಭವಾಗಿ ಜಯ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದರು. ಇದು ಮೊದಲ ಸೆಟ್‌ನಲ್ಲೇ ಪೇಸ್ ಮತ್ತು ಪುರವ ಜೋಡಿಗೆ ಮನವರಿಕೆಯಾಯಿತು. ಮೊದಲ ಸೆಟ್‌ನಲ್ಲಿ ಭಾರತದ ಜೋಡಿ ನಾಲ್ಕು ಬ್ರೇಕ್ ಪಾಯಿಂಟ್‌ಗಳನ್ನು ಎದುರಿಸಿದಾಗಲೇ ಇದು ದೃಢಪಟ್ಟಿತು. ಆದರೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಭಾರತ ಜೋಡಿ ಯಶಸ್ವಿಯಾಯಿತು.
ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡ ಪುರವ ರಾಜಾ, ಪಂದ್ಯದಲ್ಲಿ ಹಿರಿಯ ಆಟಗಾರ ಪೇಸ್ ಅವರಿಗೆ ತಕ್ಕ ಸಾಥ್ ನೀಡಿದರು. ಈ ಹಿಂದೆ ನೀಡಿದ ಪ್ರದರ್ಶನಕ್ಕಿಂತಲೂ ಮಿಗಿಲಾದ ಪ್ರದರ್ಶವನ್ನು ಪುರವ ನೀಡಿದ್ದಕ್ಕೆ ಪಂದ್ಯಕ್ಕೆ ನೆರದಿದ್ದ ಅಭಿಮಾನಿಗಳು ಸಾಕ್ಷಿಯಾದರು. ಪುರವ ಪ್ರದರ್ಶನದಲ್ಲಿ ದೇಶಾಭಿಮಾನದ ಆಟ ಹೊರಹೊಮ್ಮಿದ್ದು ಎಲ್ಲರ ಗಮನ ಸೆಳೆಯಿತು.
40ರ ಅಂಚಿನಲ್ಲಿರುವ ಪೇಸ್, ಬಿರುಸಿನ ಆಟಕ್ಕೆ ಮುಂದಾಗಲಿಲ್ಲವಾದರೂ, ತಮ್ಮ ಅನುಭವವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವುದನ್ನು ಮರೆಯಲಿಲ್ಲ. ಕೊರಿಯಾ ವಿರುದ್ಧದ ಸೆಣಸಿಗೂ ಮುನ್ನ ಪೇಸ್ 48 ಡೇವಿಸ್ ಕಪ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.
ಪೇಸ್ ಅನನುಭವಿ ಜತೆಯಾಟಗಾರನೊಂದಿಗೆ ಸೇರಿಕೊಂಡು, ಆರು ತಿಂಗಳಲ್ಲಿ ಎರಡು ಬಾರಿ ದೇಶಕ್ಕೆ ಉತ್ತಮ ಫಲಿತಾಂಶ ನೀಡಿದ್ದಾರೆ. 39 ವರ್ಷದ ಭಾರತದ ಸ್ಟಾರ್ ಟೆನಿಸ್ ತಾರೆ ಪೇಸ್ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಮಗಿಂತ ಕೆಳ ಕ್ರಮಾಂಕದ ಆಟಗಾರ ವಿಷ್ಣುವರ್ಧನ್ ಅವರೊಂದಿಗೆ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು.
ಈಗ ಕೊರಿಯಾ ವಿರುದ್ಧದ ಡೇವಿಸ್ ಕಪ್ ಪಂದ್ಯದಲ್ಲಿ ಭಾರತ ಗೆಲ್ಲಬೇಕಾದರೆ, ವಿ.ಎಂ ರಂಜೀತ್ ಮತ್ತು ವಿಜಯಂತ್ ಮಲಿಕ್ ಅವರು ಭಾನುವಾರ ನಡೆಯಲಿರುವ ರಿವರ್ಸ್ ಸಿಂಗಲ್ಸ್ ಪಂದ್ಯಗಳಲ್ಲಿ ಗೆಲ್ಲಬೇಕಾದ ಅಗತ್ಯವಿದೆ. ಈ ಇಬ್ಬರು ರಿವರ್ಸ್ ಸಿಂಗಲ್ಸ್ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಭಾರತ ಏಷ್ಯಾ ಓಸೇನಿಯಾ ಗ್ರೂಪ್ 1 ಪಂದ್ಯಾವಳಿಯಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.
ಆದರೆ, ಕೊರಿಯಾದ ಅನುಭವಿ ಆಟಗಾರರಾದ ಸುಕ್ ಯಾಂಗ್ ಜೆಯಾಂಗ್ ಮತ್ತು ಮಿನ್ ಹ್ಯಾಕ್ ಚೂ ಅವರು ಫಿಟ್ನೆಸ್ ಮತ್ತು ಆಟದ ಶೈಲಿಯಲ್ಲಿ ಭಾರತದ ಆಟಗಾರರಿಗಿಂತ ಬಲಿಷ್ಠರಾಗಿದ್ದಾರೆ. ರಂಜೀತ್ ಅವರು ಭಾನುವಾರ ನಡೆಯಲಿರುವ ಸಿಂಗಲ್ಸ್‌ನಲ್ಲಿ ಚೂ ಅವರನ್ನು ಎದುರಿಸಲಿದ್ದು, ವಿಜಯಂತ್ ಮಲಿಕ್ ಜೆಯಾಂಗ್ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ