ಕ್ರೀಡೆ

ಆಸೀಸ್‌ಗೆ ಗೆಲುವು ತಂದುಕೊಟ್ಟ ಹೇನ್ಸ್

ಕಟಕ್: ಆರಂಭಿಕ ಆಟಗಾರ್ತಿ ರಾಚೆಲ್ ಹೇನ್ಸ್ ಅವರ ಆಕರ್ಷಕ ಅರ್ಧ ಶತಕದ ಸಹಾಯದಿಂದಾಗಿ ಆಸ್ಟ್ರೇಲಿಯಾ, ಮಹಿಳಾ ವಿಶ್ವಕಪ್‌ನ ಭಾನುವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ, 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 45.4 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ, ಪಂದ್ಯದಲ್ಲಿ ಜಯ ಸಾಧಿಸಿತು.
ಆಸರೆಯಾದ ಚೆಟ್ಟಿ, ಕಾಪ್ಪ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ್ದ ಹರಿಣಗಳ ಪಡೆ, ಶೂನ್ಯ ಮೊತ್ತಕ್ಕೇ ಆರಂಭಿಕ ಆಟಗಾರ್ತಿ ಯೊಲಾಂಡಿ ಪಾಟ್ಜೀಟರ್ ಹಾಗೂ ಮೂರನೇ ಕ್ರಮಾಂಕದ ಡು ಪ್ರೆಜ್ ಅವರನ್ನು ಕಳೆದುಕೊಂಡಿತು. ಆದರೆ, ಮತ್ತೊಬ್ಬ ಆಟಗಾರ್ತಿ ಚೆಟ್ಟಿ ಹಾಗೂ ನಾಲ್ಕನೇ ಕ್ರಮಾಂಕದ ಮಾರಿಜಾನೆ ಕಾಪ್ಪ್ ಅವರು 3ನೇ ವಿಕೆಟ್‌ಗೆ 122 ರನ್ ಸೇರಿಸುವ ಮೂಲಕ, ಆರಂಭಿಕ ಕುಸಿತದಿಂದ ತಂಡವನ್ನು ಪಾರು ಮಾಡಿದರು.
33ನೇ ಓವರ್‌ನಲ್ಲಿ ಚೆಟ್ಟಿ ಹಾಗೂ 37ನೇ ಓವರ್‌ನಲ್ಲಿ ಕಾಪ್ಪ್ ಇಬ್ಬರೂ ಪೆವಿಲಿಯನ್ ಸೇರಿದ ಮೇಲೆ ತಂಡದ ಉಳಿದ ಬ್ಯಾಟರ್‌ಗಳು ಹೆಚ್ಚು ಆಡಲಿಲ್ಲ. ಆದರೆ, ಬೆನಾಡೆ ಹಾಗೂ ಫ್ರಿಟ್ಸ್ ಜೋಡಿ 7ನೇ ವಿಕೆಟ್‌ಗೆ 37 ರನ್ ಸೇರಿಸಿತು. ಅಂತಿಮವಾಗಿ, ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.
ಹೇನ್ಸ್ ಆಕರ್ಷಕ ಬ್ಯಾಟಿಂಗ್: ದಕ್ಷಿಣ ಆಫ್ರಿಕಾ ನೀಡಿದ್ದ ಸುಲಭ ಸವಾಲನ್ನು ಸ್ವೀಕರಿಸಿದ ಆಸ್ಟ್ರೇಲಿಯಾ, 33 ರನ್ ಮೊತ್ತಕ್ಕೆ ಆರಂಭಿಕ ಆಟಗಾರ್ತಿ ಲ್ಯಾನಿಂಗ್ ಅವರನ್ನು ಕಳೆದುಕೊಂಡಿತ್ತು. 34 ರನ್ ಮೊತ್ತಕ್ಕೆ ಮೂರನೇ ಕ್ರಮಾಂಕದ ಕ್ಯಾಮೆರೂನ್ ಹಾಗೂ ನಾಲ್ಕನೇ ಕ್ರಮಾಂಕದ ಬ್ಲಾಕ್‌ವೆಲ್ ಇಬ್ಬರೂ ಡಕ್‌ಔಟ್ ಆಗಿ ಪೆವಿಲಿಯನ್‌ಗೆ ಮರಳಿದ್ದು, ಆಸೀಸ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿತ್ತು.
ಆದರೆ, ನಂತರದ ಬ್ಯಾಟ್ಸ್‌ಮನ್‌ಗಳಾದ ಸ್ತಾಲೇಕರ್ ಹಾಗೂ ನಾಯಕಿ ಜೂಡಿ ಫೀಲ್ಡ್ಸ್ ನೀಡಿದ ಉತ್ತಮ ಬೆಂಬಲದಿಂದಾಗಿ 108 ಎಸೆತಗಳಲ್ಲಿ 10 ಬೌಂಡರಿ ಸೇರಿದಂತೆ 83 ರನ್ ಗಳಿಸಿದ ಹೇನ್ಸ್, ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 36ನೇ ಓವರ್‌ನಲ್ಲಿ ಹೇನ್ಸ್ ವಿಕೆಟ್ ಉರುಳಿದರೂ, ಕಾಂಗರೂ ಪಡೆ ಅದಾಗಲೇ ಜಯದ ಸನಿಹದಲ್ಲಿತ್ತು. ಅಂತಿಮ ಕ್ರಮಾಂಕದ ಬ್ಯಾಟರ್‌ಗಳಾದ ಆಸ್‌ಬೊರ್ನ್ ಹಾಗೂ ಪೆರ್ರಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ