ನವದೆಹಲಿ: ಕಾರ್ಟಿಂಗ್‌ನಲ್ಲಿ ಮಿಂಚುತ್ತಿರುವ ಬೆಂಗಳೂರಿನ ಯುವ ಚಾಲಕ ಕುಷ್ ಮೈನಿ ಮಹತ್ವದ ಸಾಧನೆ ಮಾಡಿದ್ದಾರೆ. ಭಾನುವಾರ ದಕ್ಷಿಣ ಇಟಲಿಯಲ್ಲಿ ನಡೆದ ಲಾ ಕೊಂಕಾ ಅಂತಾರಾಷ್ಟ್ರೀಯ ಸರ್ಕಿಟ್‌ನಲ್ಲಿ ನಡೆದ ವಿಶ್ವ ಸರಣಿ ಕಾರ್ಟಿಂಗ್ ರೇಸ್‌ನಲ್ಲಿ ಕುಷ್ ಮೈನಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಟೀಂ ಬೇಬಿ ತಂಡವನ್ನು ಪ್ರತಿನಿಧಿಸಿದ್ದ 12 ವರ್ಷದ ಕುಷ್ ಮೈನಿ, 60 ಮಿನಿ ವಿಭಾಗಗಳಲ್ಲಿ ಭಾಗವಹಿಸಿದ್ದ 41 ಸ್ಪರ್ಧಿಗಳಲ್ಲಿ ಒಟ್ಟಾರೆ ಮೂರನೇ ಸ್ಥಾನ ಪಡೆದರು. ಎಲ್ಲ ಸ್ಪರ್ಧಿಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. ಅಂತಿಮ ಸುತ್ತಿಗೆ 34 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು.